December 29, 2024

Newsnap Kannada

The World at your finger tips!

bath

ಪ್ರಿಯಕರನಿಗಾಗಿ ಹುಡುಗಿಯರು ಸ್ನಾನ ಮಾಡುವ ದೃಶ್ಯ ಸೆರೆ ಹಿಡಿದ ನಸ್೯

Spread the love

ಪ್ರಿಯತಮನ ಆಸೆ ಈಡೇರಿಸಲು ನಸ್ ೯ ಒಬ್ಬಳು ಹಾಸ್ಟೆಲ್ ನಲ್ಲಿ ಹುಡುಗಿಯರು ಸ್ನಾನ ಮಾಡುವ ವೇಳೆ ಆ ದೃಶ್ಯಗಳನ್ನು ಸೆರೆ ಹಿಡಿದು ರವಾನೆ ಮಾಡುತ್ತಿದ್ದ ಸಂಗತಿಯನ್ನು ಹುಡುಗಿಯರೇ ಪತ್ತೆ ಮಾಡಿ ಪೋಲೀಸರಿಗೆ ಒಪ್ಪಿಸಿದ ಘಟನೆ ಜರುಗಿದೆ.

ಬೆಂಗಳೂರಿನ ವೈಟ್ ಫೀಲ್ಡ್ ನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನಸ್೯ ಅಶ್ವಿನಿ ಹಾಗೂ ಆಕೆಯ ಪ್ರಿಯಕರನನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.

ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಕೆಲಸ ಮಾಡುವ ನಸ್೯ಗಳಿಗೆ ವಸತಿ ವ್ಯವಸ್ಥೆ ಯನ್ನೂ ಕೂಡ ಮಾಡಲಾಗಿದೆ. ಇದೇ ಹಾಸ್ಟೆಲ್ ನಲ್ಲಿ ಅಶ್ವಿನಿ ಕೂಡ ವಾಸವಾಗಿದ್ದಳು.

ಈಕೆ ತನ್ನ ಪ್ರಿಯಕರನ ಆಸೆಯಂತೆ ನಿತ್ಯ ಹಾಸ್ಟೆಲ್ ನಲ್ಲಿ ಸ್ನಾನ ಮಾಡುವ ಯುವತಿಯರ ವಿಡಿಯೋ ಹಾಗೂ ಪೋಟೋ ಗಳನ್ನು ತೆಗೆದು ನಂತರ ಆತನಿಗೆ ರವಾನೆ ಮಾಡುತ್ತಿದ್ದಳು.

vermicompost 1111

ಡಿ. 5 ರಂದು ಯುವತಿಯೊಬ್ಬಳ ಸ್ನಾನ ಮಾಡುವ ದೃಶ್ಯವನ್ನು ಸೆರೆ ಹಿಡಿಯುವ ವೇಳೆ ಅದೇ ಯುವತಿ ಅಶ್ವಿನಿ ಕೃತ್ಯವನ್ನು ಪತ್ತೆ ಹಚ್ಚಿ ಆಸ್ಪತ್ರೆಯ ಮುಖ್ಯಸ್ಥರ ಗಮನಕ್ಕೆ ತಂದು, ಆಕೆಯ ಮೊಬೈಲ್ ಓಪನ್ ಮಾಡಿದಾಗ ಸಾಕಷ್ಟು ಇಂತಹ ದೃಶ್ಯ ಗಳನ್ನು ಸೆರೆ ಹಿಡಿದಿದ್ದು ಪತ್ತೆಯಾಗಿದೆ. ಕೂಡಲೇ ಆಕೆಯ ವಿರುದ್ಧ ವೈಟ್ ಫೀಲ್ಡ್ ಪೋಲಿಸರಿಗೆ ದೂರು ನೀಡಲಾಗಿದೆ.

ಆಶ್ವಿನಿ ಹಾಗೂ ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆದು ಕೊಂಡಿರುವ ಪೋಲೀಸರು ತನಿಖೆ ಅರಂಭಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!