ಶಾಸಕ ಜಮೀರ್ ಅಹಮದ್ ಅಕ್ರಮ ಆಸ್ತಿ 87.44 ಕೋಟಿ: ಇಡಿಗೆ ಎಸಿಬಿ ವರದಿ

Team Newsnap
1 Min Read

ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಆದಾಯಕ್ಕಿಂತ ಶೇ.2031ರಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ನಿರ್ದೇಶನಾಲಯ(ಇಡಿ) ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ಸಲ್ಲಿಸಿದ ವರದಿಯಲ್ಲಿ 2005 ರಿಂದ ಇದುವರೆಗೂ 87 ಕೋಟಿ 44 ಲಕ್ಷ ರು ಗಳಿಗೂ ಅಧಿಕ ಅಕ್ರಮ ಆಸ್ತಿ ಸಂಪಾದಿಸಿದ್ದಾರೆಂದು ಹೇಳಲಾಗಿದೆ.

ಈ ಕುರಿತಂತೆ ಎಸಿಬಿ ಅಧಿಕೃತ ಪತ್ರಿಕಾ ಹೇಳಿಕೆ ನೀಡಿ ಆಗಸ್ಟ್‌ 6 ರಂದು ಜಮೀರ್‌ ಮನೆ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಪತ್ತೆಯಾದ ದಾಖಲೆಗಳ ಆಧಾರದ ಮೇಲೆ ಎಸಿಬಿ ದಾಳಿ ನಡೆದಿದೆ ಎಂದು ತಿಳಿಸಿದೆ.

  • 2006ರ ಚಾಮರಾಜಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ಜಯಗಳಿಸಿ ಮೊದಲ ಬಾರಿಗೆ ಶಾಸಕರಾದ ಜಮೀರ್‌ ಬಳಿಕ ಸತತ 4 ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ.
  • ಜಮೀರ್ ಶೇ.2031ರಷ್ಟು ಅಕ್ರಮ ಆಸ್ತಿ ಅಂದರೆ 87,44,05,057 ರೂ. ಆಸ್ತಿ ಹೊಂದಿದ್ದಾರೆ.
  • 2005ರಿಂದ ಆಗಸ್ಟ್ 2021ರ ತನಕದ ಜಮೀರ್‌ ಆಸ್ತಿಯನ್ನು ಮೌಲ್ಯ ಮಾಪನ ಮಾಡಲಾಗಿದೆ.
  • ದಾಳಿ ಸಂದರ್ಭದಲ್ಲಿ ಕೆಲವೊಂದು ದಾಖಲಾತಿಗಳು ಸಿಕ್ಕಿದ್ದು ಬೇರೆಯವರ ಹೆಸರಿನಲ್ಲಿ ದಾಖಲಾತಿ ಸಿಕ್ಕಿದೆ.

ಶಾಸಕ ಜಮೀರ್ ಆಸ್ತಿ ವಿವರ

  • ಐಟಿ ಇಲಾಖೆಗೆ ನೀಡಿದ ಆಸ್ತಿ ವಿವರ: 73,94,35,027 ಕೋಟಿ ರೂ.)
  • ಖರ್ಚು-ವೆಚ್ಚ : 17.80 ಕೋಟಿ ರೂ. (17,80,18,000 – ಕೌಟುಂಬಿಕ ನಿರ್ವಹಣೆ, ಮಗಳ ಮದುವೆ, ಮಗನ ಸಿನಿಮಾ ನಿರ್ಮಾಣ)
  • ಆದಾಯ : 4.30 ಕೋಟಿ ರೂ. (4,30,48,790 – 17 ವರ್ಷದಲ್ಲಿ ಬಂದಿರುವ ಆದಾಯ)
  • ಅಕ್ರಮ ಆಸ್ತಿ: 87 ಕೋಟಿ 44 ಲಕ್ಷ ರೂ.( 87,44,05,057 ರೂ.)
Share This Article
Leave a comment