PSI ನೇಮಕಾತಿ ಅಕ್ರಮ : ಡೈರಿಯಲ್ಲಿ ಐವರು ಮಂತ್ರಿಗಳ ಹೆಸರು

Team Newsnap
1 Min Read
Applications invited for filling up 1.30 lakh constable posts in CRPF ಸಿಆರ್ ಪಿಎಫ್ ನಲ್ಲಿ 1.30 ಲಕ್ಷ ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

CID ವಶಪಡಿಸಿಕೊಂಡಿರುವ IPS ಅಧಿಕಾರಿ ಅಮೃತ್‌ಪಾಲ್‌ ಅವರು ಬರೆದಿಟ್ಟಿರುವ ಡೈರಿಯಲ್ಲಿ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ಐವರು ಮಂತ್ರಿಗಳ ಹೆಸರು ಇದೆ ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್‌ ಆರೋಪ ಮಾಡಿದ್ದಾರೆ.

ಇದನ್ನು ಓದಿ : ಖಾತೆ ಬದಲಿಸಲು 55 ಸಾವಿರ ರು ಲಂಚ ಪಡೆದ PDO ಎಸಿಬಿ ಬಲೆಗೆ

ಡೈರಿಯಲ್ಲಿ 363 ಅಭ್ಯರ್ಥಿಗಳ ಹೆಸರಿದೆ.ಡೈರಿಯಲ್ಲಿರುವ ಮಂತ್ರಿಗಳ ಹೆಸರನ್ನು ತನಿಖೆ ಮಾಡ್ಬೇಕು. ಮೂವರು ಐಪಿಎಸ್‌, ಐಎಎಸ್‌ ಅಧಿಕಾರಿಗಳ ಹೆಸರು. ಪೊಲೀಸ್‌ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್‌ಪಾಲ್‌ ಡೈರಿ ಅವರ ಕಚೇರಿಯಲ್ಲಿ ಸಿಕ್ಕಿದೆ.ಅಮೃತ್‌ಪಾಲ್‌ ಅವರನ್ನು ಬಂಧಿಸಬೇಕು, ವಿಚಾರಣೆ ನಡೆಸಬೇಕು ಎಂದು ಎ ಪಿ ರಂಗನಾಥ್‌ ಆರೋಪಿಸಿದ್ದಾರೆ.

ಮಂತ್ರಿಗಳ ಹೆಸರನ್ನು ಬಹಿರಂಗಪಡಿಸುವುದಾಗಿ ಅಮೃತ್‌ಪಾಲ್‌ ಅವರು ಸರ್ಕಾರಕ್ಕೆ ಹೆದರಿಸುತ್ತಿದ್ದಾರೆ. ಐವರು ಮಂತ್ರಿಗಳು ಹಗರಣದಲ್ಲಿ, ಕೇವಲ ಅಶ್ವತ್ಥ್‌ ನಾರಾಯಣ್‌ ಮಾತ್ರವಲ್ಲ, ಇದರಲ್ಲಿ ಬೆಂಗಳೂರಿನ ಇಬ್ಬರು ಮಂತ್ರಿಗಳೂ ಇದ್ದಾರೆ, ಎಂದು ಸಿಐಡಿ ಕಚೇರಿ ಎದುರು ವಕೀಲ ರಂಗನಾಥ್‌ ಅವರು ಆರೋಪಿಸಿದ್ದಾರ

ಇದನ್ನು ಓದಿ : ಶಿವಲಿಂಗ ರಕ್ಷಣೆಗೆ ಸುಪ್ರೀಂ ಆದೇಶ- ಮಸೀದಿಗೆ ಮುಸ್ಲಿಮರ ಪ್ರವೇಶಕ್ಕೆ ನಿರ್ಬಂಧ ಇಲ್ಲ

ಮಾಧ್ಯಮ ಗೋಷ್ಠಿ ನಡುವೆ ಮಧ್ಯ ಪ್ರವೇಶ ಮಾಡಿದ ಪೋಲಿಸರು ರಂಗನಾಥ್ ಅವರನ್ನು ಕರೆದುಕೊಂಡು ಹೋದರು.

Share This Article
Leave a comment