ಅಕ್ಕಿ ಬದಲು ಹಣ ಕೊಟ್ರೆ ನಮಗೂ ಕಮೀಷನ್ ಕೊಡಿ: ನ್ಯಾಯಬೆಲೆ ಅಂಗಡಿ ಬಂದ್

Team Newsnap
1 Min Read

ಬೆಂಗಳೂರು: ರಾಜ್ಯದ 20 ಸಾವಿರಕ್ಕೂ ಅಧಿಕ ಪಡಿತರ ವಿತರಕರು ಇಂದಿನಿಂದ ನ್ಯಾಯಬೆಲೆ ಅಂಗಡಿಯನ್ನು ಬಂದ್ ಮಾಡಿ ರೇಷನ್ ವಿಲೇವಾರಿ ಮಾಡದಿರಲು ನಿರ್ಧಾರ ಮಾಡಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆ ಕಾರ್ಡ್ ಹೊಂದಿದ ಕುಟುಂಬಕ್ಕೆ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿಯನ್ನು ಜುಲೈನಿಂದ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿ ಬದಲಿಗೆ ಹಣವನ್ನು ಖಾತೆಗೆ ಹಾಕಲು ಸರ್ಕಾರ ನಿರ್ಧರಿಸಿದೆ.

ಆದರೆ ನ್ಯಾಯಬೆಲೆ ವರ್ತಕರು ನಮಗೆ ಈ ರೀತಿ ನಿರ್ಧಾರದಿಂದ ನಷ್ಟ ಆಗಲಿದೆ . ನಾವೂ 10 ಕೆಜಿ ಅಕ್ಕಿ ನೀಡಿದರೆ ನಮಗೆ ಕಮಿಷನ್ ಹೆಚ್ಚಾಗಿ ಸಿಗುತ್ತೆ ಅಂತಾ ವೋಟ್ ಹಾಕಿದ್ವಿ. ಈಗ 5 ಕೆಜಿ ಅಕ್ಕಿ ನೀಡಿದ್ರೇ ಕಮಿಷನ್ ಕಟ್ ಆಗುತ್ತೆ. ಇದನ್ನೇ ನಂಬಿಕೊಂಡಿರುವ ನಾವು ಆತಂಕಗೊಂಡಿದ್ದೇವೆ ಎಂದಿದ್ದಾರೆ.ಮೈಸೂರು , ಮಂಡ್ಯ , ಹಾಸನ ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ

ಸರ್ಕಾರ ನಮ್ಮನ್ನು ಕರೆದು ಚರ್ಚೆ ಮಾಡಬೇಕು, ಖಾತೆಗೆ ಹಣ ಹಾಕೋ ಬದಲು 10 ಕೆ.ಜಿಗೆ ಬೇರೆ ದವಸಗಳನ್ನ ನೀಡಿ, ಇಲ್ಲವೇ ಖಾತೆಗೆ ಹಣ ಹಾಕ್ತೀರಾ ನಮಗೆ 10 ಕೆ.ಜಿಯ ಕಮಿಷನ್ ನೀಡಿ ಅನ್ನೋ ಪಟ್ಟು ಹಿಡಿದಿದ್ದಾರೆ. ಒಟ್ಟಿನಲ್ಲಿ ಅಕ್ಕಿ ಸಿಗದೇ ಇದ್ದರೂ ಪರವಾಗಿಲ್ಲ ಹಣ ಹಾಕಿಬಿಡೋಣ ಅಂತಾ ದಿಟ್ಟ ನಿರ್ಧಾರ ಮಾಡಿದ್ದ ಸರ್ಕಾರಕ್ಕೆ ಈಗ ವಿತರಕರ ಬೇಡಿಕೆ ಹೊಸ ತಲೆನೋವಿಗೆ ಕಾರಣವಾಗಿದೆ.

Share This Article
Leave a comment