December 19, 2024

Newsnap Kannada

The World at your finger tips!

puneeth rajkumar ashwini puneethrajkumar

ಪುನೀತ್ ಮತ್ತೆ ಹುಟ್ಟಿ ಬಂದರೆ ಮಗಳ ಹೊಟ್ಟೆಯಲ್ಲಿ : ಆತ್ಮ ಸಂಭಾಷಣೆ ಯಲ್ಲಿ ಪುನೀತ್ ಹೇಳಿಕೆ

Spread the love

ಬೆಂಗಳೂರು: ಕಳೆದ ಮೂರು ವರ್ಷಗಳ ಹಿಂದೆ ಹಠಾತ್ ನಿಧನರಾದ ಪುನೀತ್ ರಾಜ್ ಕುಮಾರ್ ಪುನರ್ ಜನ್ಮದಲ್ಲಿ ಮಗಳ ಹೊಟ್ಟೆಯಲ್ಲಿ ಹುಟ್ಟಿ ಬರುವುದಾಗಿ ಪುನೀತ್ ಆತ್ಮ ಹೇಳಿದೆ

ಆಧ್ಯಾತ್ಮಿಕ ಗುರು ಡಾ. ರಾಮಚಂದ್ರ ಗುರೂಜಿ ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ ಗೆ ನೀಡಿದ ಸಂದರ್ಶನದಲ್ಲಿ ಆತ್ಮಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಈ ವೇಳೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಆತ್ಮದ ಜೊತೆ ಸಂಭಾಷಣೆ ನಡೆದಿದ್ದಾಗಿ ಹೇಳಿಕೊಂಡಿದ್ದಾರೆ.

ಅಪ್ಪು ಆತ್ಮಕ್ಕೆ ಕೇಳಿದ ಮೂರು ಪ್ರಶ್ನೆಗಳ ಬಗ್ಗೆ ರಿವೀಲ್ ಮಾಡಿದ್ದಾರೆ. ಅಪ್ಪು ಆತ್ಮದ ಕಡೆಯಿಂದ ಸಿಕ್ಕ ಉತ್ತರಗಳ ಕುರಿತು ಮಾತನಾಡಿದ್ದಾರೆ.

ಆತ್ಮ ಸಂಭಾಷಣೆ ಮಾಡುವುದಕ್ಕೆ ಸಾಧ್ಯ. ಅದೊಂದು ಟೆಕ್ನಾಲಜಿ. ಆಧ್ಯಾತ್ಮದಲ್ಲಿ ಹಿಂದಿನ ಜನ್ಮಗಳನ್ನು ತಿಳಿದುಕೊಳ್ಳುವುದಕ್ಕೆ ಹೇಗೆ ಟೆಕ್ನಾಲಜಿ ಇದೆಯೋ ಹಾಗೇ ಸತ್ತವರ ಜೊತೆ ಸಂಭಾಷಣೆ ಮಾಡುವಂತಹದ್ದೂ ಇದೆ. ಅಪ್ಪು ಆತ್ಮದ ಜೊತೆ ಸಂಭಾಷಣೆಯನ್ನು ನಾನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಿಲ್ಲ ನನ್ನ ವೈಯಕ್ತಿಕ ಮಾಹಿತಿಗೋಸ್ಕರ ನಾನು ಮಾಡಿದ್ದೇನೆ ಎಂದು ಹೇಳಿದ್ದಾರೆ.

ಪುನೀತ್ ಅವರು ಸತ್ತ ಕೆಲವೇ ದಿನಗಳಲ್ಲಿ ನಾನು ಮಾಡಿದ್ದೆ. ಪಬ್ಲಿಕ್ ಪ್ಲಾಟ್‌ಫಾರ್ಮ್‌ನಲ್ಲಿ ಮಾಡಿದರೆ, ಅದನ್ನು ತಡೆದುಕೊಳ್ಳುವ ಶಕ್ತಿ ನಮಗೆ ಇರಲಿಲ್ಲ. ಏನು? ಹೇಗೆ? ಅಂತ ಅಷ್ಟು ಪ್ರಶ್ನೆಗಳು ಬರುತ್ತವೆ.

“ನಾನು ಕೇಳಿದ ಮೊದಲ ಪ್ರಶ್ನೆ ಅಪ್ಪು ಅವರೇ ನಿಮ್ಮ ಸಾವಿನ ಬಗ್ಗೆ ಅನೇಕ ಉಹಾಅಪೋಹಗಳಿವೆ, ಅದು ನಿಜನಾ?” ಅದಕ್ಕೆ ಅವರು “ಇಲ್ಲ ನಾನು ಹೃದಯ ಸಂಬಂಧಿ ಸಮಸ್ಯೆಯಿಂದಲೇ ಸತ್ತಿದ್ದು,” ಅಂತ ಮೊದಲು ಕ್ಲಿಯರ್ ಮಾಡಿದರು.

ಎರಡನೆಯದ್ದು , “ಈಗ ಎಲ್ಲಿದ್ದೀರಿ ಅಂತ? ಅದಕ್ಕೆ ಅವರಿಂದ ಬಂದ ಉತ್ತರ “ನಾನು ಅಪ್ಪ ಅಮ್ಮನ ಹುಡುಕಾಟದಲ್ಲಿ ಇದ್ದೇನೆ”. ಎಂದು ಅಪ್ಪು ಆತ್ಮ ಹೇಳಿತ್ತು .

ಮೂರನೇ ಪ್ರಶ್ನೆ , “ಮತ್ತೆ ಹುಟ್ಟಿ ಬರುತ್ತೀರಾ? “ಅದರ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ, ಮತ್ತೊಮ್ಮೆ ಹುಟ್ಟಿ ಬರುವುದಾದರೆ ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟಿಬರುತ್ತೇನೆ”ಎಂದಿದೆ .

ನಾವು ಸಂಭಾಷಣೆ ಮಾಡಿ ತಿಳಿದುಕೊಂಡಿದ್ದು. ಮಾಡಿದ್ದು ಇಷ್ಟಕ್ಕೆ, ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಕ್ಕೆ ನಮ್ಮ ಕುತೂಹಲಕ್ಕೆ, ನಮ್ಮ ಸಂಶೋಧನೆಗೆ. ಅದನ್ನು ನಾವು ಎಲ್ಲಿ ಹೇಳಿಕೊಂಡಿಲ್ಲ ಎಂದು ಗುರೂಜಿಹೇಳಿದರು .

Copyright © All rights reserved Newsnap | Newsever by AF themes.
error: Content is protected !!