ಸರ್ಕಾರಿ ನೌಕರರಿಗೆ 27% ವೇತನ ಹೆಚ್ಚಳ : ಸಿಎಂ

Team Newsnap
1 Min Read

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಈ ಬಾರಿಯ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರಿಗೆ ಶೇಕಡಾ 27 %ರಷ್ಟು ವೇತನ ಹೆಚ್ಚಳ (Salary hike) ಮಾಡಲು ಮುಂದಾಗಿದ್ದಾರೆ.

ಸಿಎಂ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರ ಸಲಹೆಯನ್ನೂ ಮೀರಿ ವೇತನ ಹೆಚ್ಚಳ ಮಾಡಲು ಒಲವು ತೋರಿದ್ದು , ವೇತನ ಆಯೋಗದ ಶಿಫಾರಸುಗಳನ್ನು ಪೂರ್ಣಗೊಳಿಸುವ ಮಾತನ್ನಾಡಿರುವ ಸಿದ್ದರಾಮಯ್ಯ ಶೇಕಡಾ 27 %ರಷ್ಟು ವೇತನ ಹೆಚ್ಚಳ ಮಾಡಲು ಸೈ ಎಂದಿದ್ದಾರೆ.

ಸಚಿವ ಎಚ್. ಕೆ ಪಾಟೀಲ್ , ಸಚಿವ ಸಂಪುಟ ಸಭೆಯಲ್ಲಿ ಒಟ್ಟು 20 ವಿಷಯಗಳ ಮೇಲೆ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Share This Article
Leave a comment