ಡಿಸಿಸಿ ಬ್ಯಾಂಕ್ ನಾಮಿನಿ ಚೇಂಜ್ ಆದ್ರೆ ಸುಮ್ಮನಿರೋಲ್ಲಾ – ವೀರಶೈವರ ಎಚ್ಚರಿಕೆ

Team Newsnap
1 Min Read

ಮಂಡ್ಯ ಡಿಸಿಸಿ ಬ್ಯಾಂಕಿಗೆ ನಾಮ ನಿರ್ದೇಶಕರಾಗಿ ಇತ್ತೀಚೆಗಷ್ಟೇ ನೇಮಕಗೊಂಡಿದ್ದ ಕೆ.ಆರ್.ಪೇಟೆ ತಾಲ್ಲೂಕಿನ ಸಾಸಲು ನಾಗೇಶ್ ಅವರನ್ನು ಬದಲಾವಣೆ ಮಾಡಲು ಹುನ್ನಾರ ನಡೆಯುತ್ತಿರುವುದನ್ನು ಕೆ.ಆರ್.ಪೇಟೆ ತಾಲ್ಲೂಕು ವೀರಶೈವ ಮಹಾಸಭಾ ಘಟಕವು ತೀವ್ರವಾಗಿ ಖಂಡಿಸಿದೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತುರ್ತು ಸಭೆ ನಡೆಸಿದ ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ವಿ.ಎಸ್.ಧನಂಜಯ, ಉಪಾಧ್ಯಕ್ಷ ಡಿ.ಸಿ.ಕುಮಾರ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್ ಮತ್ತಿತರರ ನೇತೃತ್ವದಲ್ಲಿ ಸಭೆ ನಡೆಸಿ ವೀರಶೈವ ಮಹಾಸಭಾ ಮುಖಂಡರು ಹಾಗೂ ಬಿಜೆಪಿ ನಿಷ್ಡಾವಂತ ಕಾರ್ಯಕರ್ತರಾದ ಸಾಸಲು ನಾಗೇಶ್ ಅವರನ್ನು ನಿರ್ದೇಶಕ ಸ್ಥಾನದಿಂದ ತೆಗೆದು ಹಾಕಿ ಬೇರೆಯವರನ್ನು ನೇಮಕ ಮಾಡಲು ಹುನ್ನಾರ ನಡೆಸುತ್ತಿರುವುದನ್ನು ಖಂಡಿಸಿದರು.

ಸಾಸಲು ನಾಗೇಶ್ ಅವರನ್ನು ಬದಲಾವಣೆ ಮಾಡಿದರೆ ಅದು
ತಾಲೂಕಿನಲ್ಲಿರುವ ವೀರಶೈವ ಮಹಾಸಭಾದ 25 ಸಾವಿರ ಮಂದಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ 30ವರ್ಷಗಳಿಂದ ವೀರಶೈವ ಸಮಾಜಕ್ಕೆ ಇದೇ ಮೊದಲ ಭಾರಿಗೆ ಸರ್ಕಾರಿ ನಾಮಿನಿ ಹುದ್ದೆ ಸಿಕ್ಕಿತ್ತು. ಆದರೆ ಏಕಾ ಏಕಿ ಡಿಸಿಸಿ ನಾಮಿನಿ ನಿರ್ದೇಶಕ ಹುದ್ದೆಯಿಂದ ಕಿತ್ತು ಹಾಕಿರುವುದು ವೀರಶೈವ ಸಮುದಾಯಕ್ಕೆ ದ್ರೋಹ ಬಗೆದಂತಾಗುತ್ತದೆ. ಸಾಸಲು‌ ನಾಗೇಶ್ ಅವರನ್ನು ಬದಲಾವಣೆ ಮಾಡದೇ ಮುಂದುವರೆಸುವ ಮೂಲಕ ಮುಖ್ಯಮಂತ್ರಿ ಗಳು ವೀರಶೈವ ಸಮಾಜಕ್ಕೆ ಅನ್ಯಾಯ ಮಾಡದೇ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಮುಖಮಂತ್ರಿ ಯಡಿಯೂರಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಯಡಿಯೂರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಮಧುಸೂದನ್, ವೀರಶೈವ ಸಮಾಜದ ಮುಖಂಡರಾದ ಶೈಲೇಂದ್ರ, ಇತರರು ಇದ್ದರು.

TAGGED: ,
Share This Article
Leave a comment