ಕೊರೊನಾಗೆ ಬಲಿಯಾದರೆ ಪರಿಹಾರ ನೀಡಿ – ಸುಪ್ರೀಂ ಆದೇಶ

Team Newsnap
1 Min Read

ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡಬೇಕು. ಪರಿಹಾರದ ಮೊತ್ತವನ್ನು ಕೇಂದ್ರ ಸರ್ಕಾರವೇ ನಿರ್ಧರಿಸಬೇಕು ಎಂದು ಸುಪ್ರೀಂಕೋರ್ಟ್ ನ ನ್ಯಾ.ಅಶೋಕ್ ಭೂಷಣ್ ಪೀಠ ಆದೇಶ ನೀಡಿದೆ.

ಕೋವಿಡ್ ನಿಂದ ಮೃತ ಕುಟುಂಬ ಗಳಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡಲು ಆಗಲ್ಲ. ಹಾಗಾಗಿ ಎನ್‍ಡಿಎಂಎ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ) ಪ್ರತಿ ಕುಟುಂಬಕ್ಕೆ ಕನಿಷ್ಠ ಪರಿಹಾರ ಸಿಗುವಂತಹ ವ್ಯವಸ್ಥೆಯನ್ನು ರೂಪಿಸುವಂತೆ ಸೂಚಿಸಿದೆ.

ಕೋವಿಡ್‍ಗೆ ಸಂಬಂಧಿಸಿದ ಮರಣ ಪ್ರಮಾಣ ಪತ್ರಗಳನ್ನು ವಿತರಿಸಬೇಕು. ವಿತರಣೆ ಪ್ರಕ್ರಿಯೆ ಆರಂಭಗೊಂಡಿದ್ದರೆ ವ್ಯವಸ್ಥೆಯಲ್ಲಿ ಸುಧಾರಣೆ ತನ್ನಿ ಎಂದು ಸುಪ್ರೀಂಕೋರ್ಟ್ ಎನ್‍ಡಿಎಂಎಗೆ ನಿರ್ದೇಶನ ನೀಡಿದೆ.

ಪರಿಹಾರ ನೀಡುವ ಬಗ್ಗೆ ಎನ್‍ಡಿ ಎಂಎ ತನ್ನ ಕರ್ತವ್ಯ ನಿರ್ವಹಣೆ ಯಲ್ಲಿ ವಿಫಲವಾಗಿದೆ. ಮಾರ್ಗಸೂಚಿ ರೂಪಿಸುವಲ್ಲಿ ವಿಫಲವಾಗಿದೆ ಎಂದು ಎನ್‍ಡಿಎಂಗೆ ನ್ಯಾಯಾಲಯ ಚಾಟಿ ಬೀಸಿತ್ತು.

ಎನ್‍ಡಿಎಂಎ ಆರು ತಿಂಗಳಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಮಾರ್ಗಸೂಚಿ ರೂಪಿಸಬೇಕು. ಪರಿಹಾರದ ಮೊತ್ತ ಸರ್ಕಾರ, ಎನ್‍ಡಿಎಂಗೆ ವಿವೇಚನೆಗೆ ಬಿಟ್ಟದ್ದು ಎಂದು ಸುಪ್ರೀಂಕೋರ್ಟ್ ಹೇಳಿದೆ.

Share This Article
Leave a comment