ಕಾಂಗ್ರೆಸ್ ನಲ್ಲಿ ದುಡ್ಡು ಕೊಟ್ಟರೆ ಭಯೋತ್ಪಾದಕರಿಗೂ ಟಿಕೆಟ್ ಕೊಡ್ತಾರೆ ಎಂದು ಗುರುವಾರ ಕಾಂಗ್ರೆಸ್ ತೊರೆದು
ಜೆಡಿಎಸ್ ಸೇರ್ಪಡೆಯಾದ ಎಸ್ಎಂ ಕೃಷ್ಣ ತಮ್ಮನ ಪುತ್ರ ಗುರುಚರಣ್ ಹೇಳಿದರು
ಮದ್ದೂರು ಕ್ಷೇತ್ರದಿಂದ ಕದಲೂರು ಉದಯ್ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನಗೊಂಡಿರುವಎಸ್. ಗುರುಚರಣ್ ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರ್ಪಡೆಯಾದರು.
ಗುರುವಾರ ಬೆಳಿಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಮದ್ದೂರು ತಾಲ್ಲೂಕು, ಸೋಮನಹಳ್ಳಿ ಗ್ರಾಮದ ಗುರುಚರಣ್ ನಿವಾಸಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಎಚ್ ಡಿಕೆ ಸಮ್ಮುಖದಲ್ಲಿ ಗುರುಚರಣ್ ಹಾಗೂ ಅವರ ಬೆಂಬಲಿಗರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಜೆಡಿಎಸ್ ಸೇರ್ಪಡೆ ನಂತರ ಮಾತನಾಡಿದ ಗುರುಚರಣ್, ಟಿಕೆಟ್ ಕೊಡುತ್ತೇವೆ ಎಂದು ಹೇಳಿ ನನ್ನನ್ನು ಮುಗಿಸಿದರು. ಈಗ ಕಾಂಗ್ರೆಸ್ ನಿರ್ನಾಮ ಕಾಲ ಹತ್ತಿರ ಬರುತ್ತಿದೆ. ದುಡ್ಡು ಕೊಟ್ಟರೆ ಕಾಂಗ್ರೆಸ್ ನಲ್ಲಿ ಟೆರರಿಸ್ಟ್ ಗಳಿಗೂ ಟಿಕೆಟ್ ಕೊಡುತ್ತಾರೆ ಎಂದು ಲೇವಡಿ ಮಾಡಿದರು.ಇದನ್ನು ಓದಿ –ವಿಧಾನಸಭಾ ಚುನಾವಣೆ : ಬಿಜೆಪಿಯಿಂದ ಅಂತಿಮ ಪಟ್ಟಿ ಪ್ರಕಟ
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ