ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇಬ್ರಾಹಿಂ ರಾಜೀನಾಮೆ

Team Newsnap
1 Min Read
Family politics: am i at fault Modi does not do children? Ibrahim

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸಿ ಎಂ. ಇಬ್ರಾಹಿಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಇಬ್ರಾಹಿಂ ರಾಜೀನಾಮೆ ನೀಡಿದ ನಂತರ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ತರಬೇಕು ಎಂಬ ಚಿಂತನೆ ನಡೆದಿದೆ,

ಕಾಂಗ್ರೆಸ್ ಪಕ್ಷದಲ್ಲಿದ್ದರೇ ಸಿಎಂ ಇಬ್ರಾಹಿಂ ಸಚಿವರಾಗುತ್ತಿದ್ದರು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗೌರವ ಇಲ್ಲದ ಕಡೆ ಸ್ಥಾನಕ್ಕೆ ಹೋಗುವುದಿಲ್ಲ. ಮಾನಕ್ಕೆ ಹೋಗುತ್ತೀವಿ ಎಂದರು.

ಯುಟಿ ಖಾದರ್ ಅವರನ್ನು ಡಿಸಿಎಂ ಮಾಡಬಹುದಿತ್ತು. ಈಗ ಅವರು ಎದ್ದೇಳಂಗೂ ಇಲ್ಲ. ಮಾತನಾಡಂಗೂ ಇಲ್ಲ ಎಂಬುದಾಗಿ ಖಾದರ್ ಸ್ಪೀಕರ್ ಮಾಡಿದ್ದಕ್ಕೆ ಟೀಕಿಸಿದರು.

ಈ ನಡುವೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರ ಸ್ವಾಮಿ ರಾಜೀನಾಮೆ ನೀಡಿ ಸಧ್ಯಕ್ಕೆ ರಾಜಕಾರಣದಿಂದ ನೇಪಥ್ಯಕ್ಕೆ ಸರಿಯುವ ಮಾತುಗಳನ್ನು ಹೇಳಿದ್ದಾರೆ ಅಲ್ಲದೇ ಮತ್ತೆ ಸಿನಿಮಾ ರಂಗದತ್ತ ಒಲವು ತೋರಿದ್ದಾರೆ.

Share This Article
Leave a comment