January 15, 2025

Newsnap Kannada

The World at your finger tips!

congress , election , news

Is Congress giving electricity to keep dog in AC room? Ibrahim's question ಎಸಿ ರೂಂನಲ್ಲಿ ನಾಯಿ ಸಾಕಲು ಕಾಂಗ್ರೆಸ್ ಕರೆಂಟ್ ಕೊಡುತ್ತಾ? ಇಬ್ರಾಹಿಂ ಪ್ರಶ್ನೆ

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಇಬ್ರಾಹಿಂ ಇಂದು ಅಧಿಕಾರ ಸ್ವೀಕಾರ – ಜೆಡಿಎಸ್ ಗೆ ಹೊಸ ರೂಪ, ತರುವ ಯತ್ನ

Spread the love

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಇಂದು ಸಿ. ಎಂ .ಇಬ್ರಾಹಿಂ ಅಧಿಕಾರ ಸ್ವೀಕರಿಸಲಿದ್ದಾರೆ. ಅದಕ್ಕೂ ಮುನ್ನ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಕಲೇಶಪುರ ಶಾಸಕ ಎಚ್ ಕೆ ಕುಮಾರಸ್ವಾಮಿ ಹೇಳಿದ್ದಾರೆ.

ನೂತನ ಅಧ್ಯಕ್ಷರಾಗಿ ಸಿ ಎಂ ಇಬ್ರಾಹಿಂ ಅಧಿಕಾರ ಸ್ವೀಕರಿಸಿ ಜೆಡಿಎಸ್ ಬಲಪಡಿಸುವ ಹೊಣೆ ಹೊರಲಿದ್ದಾರೆ . ಪಕ್ಷಕ್ಕೆ ಹೊಸ ರೂಪ ಮತ್ತು ಹುರುಪು ತರಲು ಜೆಡಿಎಸ್ ಅಧಿಪತಿಗಳು ಮೊದಲ ಹೆಜ್ಜೆ ಇಟ್ಟಿದ್ದಾರೆ . ಈ ಹಿಂದೆಯೂ ಕೂಡ ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ನಿರ್ಗಮಿತ ಆಧ್ಯಕ್ಷ , ಶಾಸಕ ಕುಮಾರಸ್ವಾಮಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದರು.

ಈ ಸಂಬಂಧ ಈಗಾಗಲೇ ಪಕ್ಷದ ಮುಖಂಡರಾದ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರು ನನ್ನ ಜೊತೆ ಮಾತನಾಡಿದ್ದಾರೆ, ಪಕ್ಷದ ಅಭಿವೃದ್ಧಿಗೆ ಸಹಕರಿಸಿದರೆ ಯಾವುದೇ ತ್ಯಾಗಕ್ಕೂ ಸಿದ್ಧ ಎಂದರು.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನನ್ನ ಕ್ಷೇತ್ರದತ್ತ ಗಮನ ಹರಿಸಬೇಕು, ಇಬ್ರಾಹಿಂ ಅವರಿಗೆ ಸಹಕಾರ ನೀಡುತ್ತೇನೆ ಎಂದರು.

Copyright © All rights reserved Newsnap | Newsever by AF themes.
error: Content is protected !!