ಐಎಎಸ್ ಅಧಿಕಾರಿಯ ₹27.86 ಕೋಟಿ ಮೌಲ್ಯದ ಆಸ್ತಿ ಜಪ್ತಿ

Team Newsnap
1 Min Read

ಛತ್ತೀಸ್‌ಗಡ ಮೂಲದ ಐಎಎಸ್‌ ಅಧಿಕಾರಿ ಬಾಬುಲಾಲ್ ಅಗರವಾಲ್‌ ಅವರಿಗೆ ಸೇರಿದ ₹27.86 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣ, ಆದಾಯ ಮೀರಿದ ಆಸ್ತಿ ಹೊಂದಿರುವ ಪ್ರಕರಣಗಳಿಗೆ ಸಂಬಂಧಿಸಿ ಅಗರವಾಲ್‌ ಮತ್ತು ಕುಟುಂಬದ ಸದಸ್ಯರ ವಿರುದ್ಧ ಇ.ಡಿ ತನಿಖೆ ನಡೆಸುತ್ತಿದೆ.

ಜಪ್ತಿ ಮಾಡಿದ ಆಸ್ತಿಯಲ್ಲಿ, ಬ್ಯಾಂಕ್‌ನ ಅವರ ಖಾತೆಯಲ್ಲಿದ್ದ ನಗದು ಸೇರಿದಂತೆ ಸ್ಥಿರಾಸ್ತಿ, ಚರಾಸ್ತಿ ಒಳಗೊಂಡಿದೆ. ಇವುಗಳ ಒಟ್ಟು ಮೌಲ್ಯದ ₹27.86 ಕೋಟಿ ಎಂದು ಇ.ಡಿ ಹೇಳಿಕೆ ತಿಳಿಸಿದೆ.

1988ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಅಗರವಾಲ್‌ ಅವರನ್ನು ನವೆಂಬರ್ 9ರಂದು ರಾಯಪುರದ ಅವರ ನಿವಾಸದಲ್ಲಿ ಬಂಧಿಸಲಾಗಿತ್ತು. ಡಿ. 5ರವರೆಗೂ ಅವರು ನ್ಯಾಯಾಂಗ ಬಂಧನಕ್ಕೆ ಒಪ್ಫಿಸಲಾಗಿದೆ. ಬಂಧನಕ್ಕೆ ಒಳಗಾದ ಸಂದರ್ಭದಲ್ಲಿ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬಂಧನದ ನಂತರ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.

Share This Article
Leave a comment