ಈಗಾಗಲೇ ಕಾಂಗ್ರೆಸ್ -. ಬಿಜೆಪಿ ಪಕ್ಷದತ್ತ ಮುಖ ಮಾಡಿರುವ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ . ದೇವೇಗೌಡರನ್ನು ನಾನು ಪುನಃ ಜೆಡಿಎಸ್ ನಲ್ಲೇ ಉಳಿಯುವಂತೆ ಮಾಡುತ್ತೇನೆ . ಆದರೆ ನೀವು ನನ್ನ ಎರಡು ಷರತ್ತಿಗೆ ಒಪ್ಪಿದರೆ ಮಾತ್ರ.
-ಇದು ಮೇಲುಕೋಟೆ ಶಾಸಕ ಸಿ ಎಸ್ ಪುಟ್ಟರಾಜು ಅವರು ಮಾಜಿ ಪ್ರಧಾನಿ ದೇವೇಗೌಡರಿಗೆ ಭರವಸೆ ನೀಡಿದ್ದಾರೆಂದು ಗೊತ್ತಾಗಿದೆ.
ಶಾಸಕ ಜಿ. ಟಿ. ದೇವೇಗೌಡರ ಜೊತೆ ಆತ್ಮೀಯ ಸಂಬಂಧ ಹೊಂದಿರುವ ಶಾಸಕ ಪುಟ್ಟರಾಜು ಬಹುದೊಡ್ಡ ಟಾಸ್ಕ್ ಅನ್ನು ಹೊತ್ತುಕೊಂಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಯಶಸ್ಸು ಸಿಗುತ್ತದೆ ಎಂಬುದನ್ನು ಕಾದು ನೋಡಬೇಕು.
ಇದನ್ನು ಓದಿ : IPL ಪಂದ್ಯದ ಸಮಾರೋಪದಲ್ಲಿ ಮಂಡ್ಯ – ಶಿವಮೊಗ್ಗ ಕಲಾವಿದರಿಂದ ಪೂಜಾ ಕುಣಿತ, ಡೊಳ್ಳು ಕುಣಿತ
2 ಷರತ್ತುಗಳು ಯಾವವು ?
ಪಕ್ಷದಲ್ಲಿ ತೀರಾ ಅತೃಪ್ತರಾಗಿರುವ ಜಿ ಟಿ ಡಿ ಅವರನ್ನು ನಾನು ಪಕ್ಷದಲ್ಲೆ ಉಳಿಸುತ್ತೇನೆ. ನನ್ನ ಷರತ್ತುಗಳಿಗೆ ದೇವೇಗೌಡರು, ಕುಮಾರಸ್ವಾಮಿ ಹಾಗೂ ಗೌಡರ ಕುಟುಂಬ ಒಪ್ಪಬೇಕು. ಆಗ ಮಾತ್ರ ನನ್ನ ಪ್ರಯತ್ನ ಮುಂದುವರೆಸುವೆ ಎಂದು ಪುಟ್ಟರಾಜು ಹೇಳಿದ್ದಾರೆ.
- ನಾನು ಮೊದಲು ಕುಮಾರಸ್ವಾಮಿ ಅವರ ಬಳಿ ತೀರಾ ಮುಕ್ತವಾಗಿ ಮಾತನಾಡಿ ನಂತರ
ಜಿ ಟಿ ದೇವೇಗೌಡರನ್ನು ಕರೆದುಕೊಂಡು ಬರುವೆ. ಆ ವೇಳೆ ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಕೋಪ ಮಾಡಿಕೊಳ್ಳಬಾರದು . ಜೊತೆಗ ನಾನು ಮಾತನಾಡುವ ಮುನ್ನ ಗೌಡರ ಕುಟುಂಬದ ಸದಸ್ಯರು ಹಾಗೂ ಶಾಸಕ ಸಾ ರಾ ಮಹೇಶ್ ಕಡ್ಡಾಯವಾಗಿ ಇರಕೂಡದು. - ಜೆಡಿಎಸ್ ಗೆ ಪ್ರತಿಯೊಂದು ಕ್ಷೇತ್ರವೂ ಬಹಳ ಮುಖ್ಯ. ಈ ವೇಳೆ ಕುಮಾರಸ್ವಾಮಿ ಪಕ್ಷದಿಂದ ಹೋಗುವವರು ಹೋಗಬಹುದು ಎಂದು ಪದೇ ಪದೇ ಹೇಳಿ ಜಿದ್ದು ಸಾಧಿಸುವ ಮಾತುಗಳನ್ನು ಕೈಬಿಡಬೇಕು. ಚುನಾವಣೆ ಮುಂದಿಟ್ಟುಕೊಂಡು ಇಂತಹ ಮಾತುಗಳಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಜಿ ಟಿ ದೇವೇಗೌಡರ ಷರತ್ತಿಗೂ ಒಪ್ಪಬೇಕು.
ಪುಟ್ಟರಾಜು ಅವರ ಈ ಷರತ್ತುಗಳಿಗೆ ಗೌಡರ ಕುಟುಂಬ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕು.
- ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
- 2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
- 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ
- HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ
- ಮಳೆ ನಿಂತರೂ ಮರದ ಹನಿ ನಿಲ್ಲದು
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ