ದಾವಣಗೆರೆಯಲ್ಲಿ ನಾನು ಜೆಡಿಎಸ್ ಸೇರುವೆ – ದಿನಾಂಕ ನಿಗದಿಯಾಗಿಲ್ಲ : ಸಿ ಎಂ ಇಬ್ರಾಹಿಂ

Team Newsnap
1 Min Read

ನಾನು ಜೆಡಿಎಸ್ ಗೆ ಸೇರುತ್ತೇನೆ, ಯಾವತ್ತು ಎಂಬುದು ಗೊತ್ತಿಲ್ಲ. ದಿನಾಂಕ ಇನ್ನೂ ನಿಗದಿಯಾಗಿಲ್ಲ. ಶೀಘ್ರದಲ್ಲಿಯೇ ದಿನಾಂಕ ತಿಳಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇವೇಗೌಡರು ಹಾಗೂ ಕುಮಾರಸ್ವಾಮಿ ಒಂದು ಗುಣ ಅಂದರೆ ಯಾವತ್ತೂ ಡ್ಯಾಮ್‍ಗೆ ಡ್ಯಾಮೇಜ್ ಮಾಡಲ್ಲ. ಅಲ್ಲಿ ನೀರು ಸೋರುತ್ತಿದ್ದರೆ ಬಕೆಟ್ ಹಿಡಿತಾರೆ. ಸೋರಿ ಹೋಗುವ ನೀರಿನಲ್ಲೇ ಬಕೆಟ್ ತುಂಬಿಸಿಕೊಳ್ತಾರೆ ಎಂದರು.

ಯಾವುದೇ ವಿವಾದ ಸೃಷ್ಟಿ ಮಾಡಿದರೂ ಸಕ್ಸಸ್ ಆಗುತ್ತಿಲ್ಲ. ಗೋಹತ್ಯೆ, ಧಾರ್ಮಿಕ ಬಿಲ್ ತಂದರು. ಅದು ಅಲ್ಲೇ ನಿಂತಿದೆ. ಈಗ ಹಿಜಬ್ ವಿವಾದ ತಂದಿದ್ದಾರೆ. ಹಿಜಬ್ ಅನಾದಿಕಾಲದಿಂದಲೂ ಇದೆ. ಮೈಸೂರು ಮಹಾರಾಜರು ಅಂದಿನ ಶಾಲಾ ಕಾಲೇಜಿಗೆ ಹೆಣ್ಣುಮಕ್ಕಳು ಹೋಗುವ ಗಾಡಿಗೆ ಪರದೆ ಹಾಕಿದ್ದರು. ಹೆಣ್ಣು ಮಕ್ಕಳಿಗೆ ಪರದೆ ಅಲ್ಲದೆ ಗಾಡಿಗೂ ಪರದೆ ಹಾಕಿದ್ದರು.

ಈಗ ಉತ್ತರ ಕರ್ನಾಟಕದಲ್ಲಿ ತಲೆ ಮೇಲೆ ಸೆರಗು ಹಾಕದ ಹೆಣ್ಣು ಮಕ್ಕಳು ಸಿಗಲ್ಲ. ಅದು ಅವರ ಸಂಸ್ಕೃತಿಯಾಗಿದೆ. ತಲೆ ಮೇಲೆ ಬಟ್ಟೆ ಹಾಕೋದು ಹಿಜಬ್, ಅದು ಬುರ್ಕ ಅಲ್ಲಾ. ಅಯ್ಯೋ ಹುಚ್ಚಮುಂಡೇವ ಕೋವಿಡ್‍ಗೆ ಹಾಕುವುದನ್ನೆ ಇವರು ಹಾಕಿದ್ದಾರೆ. ಬೊಮ್ಮಾಯಿನೇ ಹಿಜಬ್ ಹಾಕಿದ್ದಾನೆ, ಸಚಿವರು ಹಾಕಿದ್ದಾರೆ, ನಾನು ಹಾಕಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ.

ಹೆಣ್ಣು ಮಕ್ಕಳು ಮುಖಮುಚ್ಚಿಕೊಂಡರೆ ನಿಮಗೇನು ಸಮಸ್ಯೆ. ಮುಖ ನೋಡೋ ಆನಂದ ನಿಮಗ್ಯಾಕೆ. ಅವರು ಬ್ಯೂಟ್ ಕಂಟೆಸ್ಟ್‌ಗೆ ಬರುತ್ತಿಲ್ಲ. ಕೆಲವರು ಮುಸ್ಲಿಂ ಹೆಣ್ಣುಮಕ್ಕಳು ಹಿಜಬ್ ಹಾಕಲ್ಲ. ಅವರಿಗೆ ಹಾಕಿ ಅಂತ ಒತ್ತಾಯ ಮಾಡಲ್ಲ. ಹಾಕುವವರನ್ನ ಯಾಕೆ ತಡೆಯುತ್ತೀರಾ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.

Share This Article
Leave a comment