ಬೆಂಗಳೂರು: ನಾನು ಮಾಡಿದ್ದು ತಪ್ಪು. ನನ್ನ ತಪ್ಪಿಗೆ ವಿಷಾದ ಕೂಡ ವ್ಯಕ್ತ ಪಡಿಸಿದ್ದೇನೆ. ನಾನು ಮಾಡಿದಂತ ತಪ್ಪಿಗಾಗಿ ಬೆಸ್ಕಾಂಗೆ ರೂ.68,526 ದಂಡವನ್ನು ವಿಧಿಸಿದೆ. ಅದನ್ನು ಕಟ್ಟಿದ್ದೇನೆ. ಅದೇನೋ ಕರೀತಿರಲ್ಲ ವಿದ್ಯುತ್ ಕಳ್ಳ ಅನ್ನೋದನ್ನು ನಿಲ್ಲಿಸಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಮನೆಯ ದೀಪಾಲಂಕಾರಕ್ಕೆ ಪಡೆದಂತ ಅಕ್ರಮ ವಿದ್ಯುತ್ ಸಂಪರ್ಕದ ಬಗ್ಗೆ ತಪ್ಪಿನ ಅರಿವಾದ ಕೂಡಲೇ ವಿಷಾದ ವ್ಯಕ್ತ ಪಡಿಸಿದ್ದೇನೆ. ಬೆಸ್ಕಾಂ ಅಧಿಕಾರಿಗಳು ನನಗೆ ಕೊಟ್ಟ ದಂಡದ ಪಾವತಿಯನ್ನು ಮಾಡಿದ್ದೇನೆ ಎಂಬುದಾಗಿ ಹೇಳಿದರು.
ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದೇನೆ ಎಂಬ ಕುರಿತಂತೆ ನಾನು 2.25 ಕಿಲೋವ್ಯಾಟ್ ವಿದ್ಯುತ್ ಅಕ್ರಮವಾಗಿ ಬಳಕೆ ಮಾಡಿದ್ದೇನೆ ಎಂಬುದಾಗಿ ಬಿಲ್ ಕೊಟ್ಟಿದ್ದಾರೆ ಎಂದು ಹೇಳಿದರು.ಶಬರಿಮಲೆಗೆ ಭೇಟಿ ನೀಡಿದ ಸಚಿವೆ ಶೋಭಾ ಕರಂದ್ಲಾಜೆ
ನನ್ನ ಮನೆಗೆ 33 ಕಿಲೋ ವ್ಯಾಟ್ ಗಾಗಿ ಪರ್ಮೀಷನ್ ಪಡೆದಿದ್ದೇನೆ. ಆದ್ರೇ ದೀಪಾಲಂಕಾರಕ್ಕೆ ವಿದ್ಯುತ್ ಸಂಪರ್ಕ ಅಕ್ರಮ ಪಡೆದ ಆರೋಪದ ಹಿನ್ನಲೆಯಲ್ಲಿ ಬೆಸ್ಕಾಂ ಅಧಿಕಾರಿಗಳು ನನಗೆ 68,526 ರೂಪಾಯಿ ದಂಡದ ಬಿಲ್ ನೀಡಿದ್ದಾರೆ ಎಂದರು.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ