September 21, 2021

Newsnap Kannada

The World at your finger tips!

ನಾನು ಪಾಠ ಕಲಿತಿದ್ದೇನೆ: ವಿನಯ್ ಕುಲಕರ್ಣಿ

Spread the love

ಭವಿಷ್ಯದ ಜೀವನದಲ್ಲಿ ನಾನು ಹೇಗೆ ಇರಬೇಕು ಎಂಬ ಪಾಠವನ್ನು ಜೈಲಿನಲ್ಲಿದ್ದ ಸಮಯದಲ್ಲಿ ಕಲಿತಿರುವುದಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿಕೊಂಡಿದ್ದಾರೆ.
ಧಾರವಾಡ ಜಿಪಂ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಆರೋಪದಡಿ 9 ತಿಂಗಳಿಂದ ಜೈಲುವಾಸಿಯಾಗಿದ್ದ ವಿನಯ್ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಇಂದು ಬಿಡುಗಡೆಯಾಗುತ್ತಿದ್ದಂತೆ ವರದಿಗಾರರೊಂದಿಗೆ ಮಾತನಾಡಿದರು.


ಪುಸ್ತಕ ಓದುವ ಅಭ್ಯಾಸವೇ ನನಗೆ ಇರಲಿಲ್ಲ. ಕಾರಾಗೃಹದಲ್ಲಿದ್ದ ವೇಳೆ ಪುಸ್ತಕ ಓದುವುದನ್ನು ರೂಢಿಸಿಕೊಂಡೆ. ಈ ಅವಧಿಯಲ್ಲಿ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ ಎಂದರು.


ಉಳಿದ ರಾಜಕಾರಣಿಗಳಂತಲ್ಲ. ನಾನೇ ಬೇರೆ. ನಾನೊಬ್ಬ ರೈತ. ಶೀಘ್ರದಲ್ಲೇ ಈ ಆರೋಪದಿಂದ ಹೊರಬರುವ ವಿಶ್ವಾಸವಿದೆ ಎಂದು ಮಾಜಿ ಸಚಿವರು ನುಡಿದರು.
ತಾವು ನಿರಪರಾಧಿ ಎಂದು ಹೇಳಿಕೊಂಡ ವಿನಯ್ ಕುಲಕರ್ಣಿ, ತಮ್ಮ ಮೇಲೆ ಭರವಸೆಯಿಟ್ಟು ಸುಪ್ರೀಂಕೋರ್ಟ್ ಜಾಮೀನು ನೀಡಿರುವುದಕ್ಕೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

error: Content is protected !!