ನಾನು ಕಾಂಗ್ರೆಸ್ ಸೇರಿದ ನಂತರವೇ ಸಿಎಂ ಆಗಿದ್ದು – ಮೂಲ-ವಲಸಿಗ ಎಲ್ಲಿದೆ? ಸಿದ್ದು ಪ್ರಶ್ನೆ

Team Newsnap
1 Min Read
Pic Credits : deccanherald.com

ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಗೊಂದಲ‌ ಇಲ್ಲ‌. ಮೂಲ ವಲಸಿಗ ಅನ್ನೋ ಪ್ರಶ್ನೆಯೇ ಈಗ ಉದ್ಭವಿಸುವುದಿಲ್ಲ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಮೂಲ -ವಲಸಿಗ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ ಪ್ರಸ್ತಾಪಿಸಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ್ರು. ಇಬ್ರಾಹಿಂ ಹೇಳಿದ್ದಾರೆ. ಸೊಸೆ ಮನೆಗೆ ಬಂದ ಮೇಲೆ‌ ಅತ್ತೆ ಸೊಸೆ ಇಬ್ಬರೂ ಒಂದೇ ಎಂದು. ನಾನು ಕಾಂಗ್ರೆಸ್ ಸೇರಿ ಚೀಫ್ ಮಿನಿಸ್ಟರ್ ಆದ ಮೇಲೆ ಮೂಲ ಎಲ್ಲಿಂದ ಬತ್ತದಪ್ಪಾ? ಅದೆಲ್ಲಾ ಏನಿಲ್ಲ ಎಂದರು.

ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಯಾರು ಎಂಬ ವಿಚಾರವಾಗಿ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ನನ್ನ, ಡಿಕೆ ಶಿವಕುಮಾರ್ ನಡುವೆ ಯಾವುದೇ ಸಮನ್ವಯ ಸಮಿತಿ ರಚನೆ ಆಗುತ್ತಿಲ್ಲ. ಕಾಂಗ್ರೆಸ್​​ನಲ್ಲಿ ಮೂಲ ವಲಸಿಗ ಎಂಬ ಪ್ರಶ್ನೆಯು ಇಲ್ಲ ಎಂದರು. 

ಸೊಸೆ ಮನೆಗೆ ಬರುವವರೆಗೂ ಹೊರಗಿನವಳು. ಬಂದ ಮೇಲೆ ಸೊಸೆ ಮನೆಯವಳೆ ಆಗುತ್ತಾಳೆ. ಅದೇ ರೀತಿ ನಾನು ಹೊರಗಿನಿಂದ ಬಂದವನು. ಕಾಂಗ್ರೆಸ್ ಗೆ ಬಂದ ಮೇಲೆ‌ ನಾನು 5 ವರ್ಷ ಮುಖ್ಯಮಂತ್ರಿ ಆಗಿದ್ದೇನೆ. ನಾನು ಮನೆಯವನೇ. ಸಿಎಂ ಯಾರಾಗಬೇಕೆಂಬುದು ಚುನಾವಣೆ ಫಲಿತಾಂಶದ ನಂತರ‌ ಶಾಸಕರು ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇನ್ನು ಚುನಾವಣೆ ಎರಡೂವರೆ ವರ್ಷ ಇದೆ. ಈಗಲೇ ಸಿಎಂ ಅಭ್ಯರ್ಥಿ ಬಗ್ಗೆ ಮಾತುಗಳು ಇಲ್ಲ ಎಂದು ಪ್ರಶ್ನೆ ಮಾಡಿದರು.

ರಾಜ್ಯದಲ್ಲಿ ಕೋವಿಡ್ ಲಸಿಕೆ ಕುರಿತು ಸಚಿವ ಸುಧಾಕರ್ ಸುಳ್ಳು ಹೇಳುತ್ತಿದ್ದಾನೆ. ಲಸಿಕೆ ದಾಸ್ತಾನಿದ್ರೆ ಜನ ಯಾಕೆ ಶಾಪ ಹಾಕ್ತ ಹೋಗ್ತಿದ್ರು? ದಾಸ್ತಾನು ಇದ್ರೆ ಜನ ಕ್ಯೂನಲ್ಲಿ ಯಾಕೆ‌ ನಿಲ್ಲಬೇಕಿತ್ತು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Share This Article
Leave a comment