ನನಗೆ KING ಆಗುವ ಆಸೆ ಇಲ್ಲ, ಕಿಂಗ್ ಮೇಕರ್ ಆಗೋಕೆ ಇಷ್ಟ. ರಾಜ್ಯವೇ ನನ್ನ ಕ್ಷೇತ್ರ ಎಂದು ಎಂಎಲ್‍ಸಿ ಸಿಎಂ ಇಬ್ರಾಹಿಂ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಇಬ್ರಾಹಿಂ ಅವರು, ನಾನು ಸೈದ್ಧಾಂತಿಕವಾಗಿ ಹೋರಾಟ ಮಾಡಿ ಬಂದವನು. ಹಾಗಾಗಿ ಜೆಡಿಎಸ್ ಕಡೆ ಹೋಗ್ತಿದ್ದೇನೆ. ಜೆಡಿಎಸ್‍ಗೆ ಹೋದರೆ ಪಕ್ಷದ ಅಧ್ಯಕ್ಷ ಮಾಡೋದು ಅಥವಾ ನನಗೆ ಯಾವ ಸ್ಥಾನ ಕೊಡೋದು, ಬಿಡೋದು ಅವರಿಗೆ ಬಿಟ್ಟಿದ್ದು ಎಂದರು.
ನಾನು ಯಾವುದೇ ಸ್ಥಾನ ಅಪೇಕ್ಷೆ ಮಾಡುತ್ತಿಲ್ಲ, ಮಾನ ನಿರೀಕ್ಷೆ ಮಾಡಿ ಹೋಗ್ತೀನಿ. ನಾನು ಕ್ಷೇತ್ರ ರಾಜಕಾರಣದ ನಾಯಕ ಅಲ್ಲಾ ಎಂದು ಹೇಳಿದರು.
ದೇವೇಗೌಡರ ವ್ಯಕ್ತಿತ್ವಕ್ಕೆ ನಾನು ಬೆಲೆ ಕೊಡುತ್ತೇನೆ. ಕಾಂಗ್ರೆಸ್‍ನಿಂದ, ಬಿಜೆಪಿಯಿಂದ ಎಲ್ಲಾ ಕಡೆಯಿಂದಲೂ ಈಗ ಆಚೀಚೆ ಹೋಗುತ್ತಾರೆ. ಟೆಂಟಿಗೆ ಬೆಂಕಿಗೆ ಬಿದ್ದಾಗ ಹೇಗೆ ಓಡ್ತಾರೋ, ಹಾಗೆ ಆಚೀಚೆ ಓಡಿ ಹೋಗ್ತಾರೆ ಎಂದು ಟೀಕಿಸಿದರು.
ನಾವು ರಾಜ್ಯದಲ್ಲಿ ಶೇ 21 ರಷ್ಟು ಇದ್ದೀವಿ. 70 ವರ್ಷ ರಾಜ್ಯದಲ್ಲಿ ಯಾರಾದರೂ ಮುಸ್ಲಿಂ ಅಧ್ಯಕ್ಷರಾದ್ರಾ? ಯಾರಾದರೂ ನಮಗೆ ಒಳ್ಳೆಯ ಖಾತೆ ನೀಡಿದ್ರಾ? ಎಂದು ಪ್ರಶ್ನೆ ಮಾಡಿದರು.
ಹಿಜಾಬ್ ವಿಚಾರ ಪ್ರಶ್ನೆ ಮಾಡಿದವರು, ಚೆನ್ನಮ್ಮ, ಇಂದಿರಾ ಗಾಂಧಿ ಸೆರಗಾಕುತ್ತಿದ್ದರು. ಅದನ್ನು ಪ್ರಶ್ನೆ ಮಾಡಿದ್ರಾ.? ನಮಗೆ ಸ್ಥಾನ ಕೊಡೋದು ಬೇಡಾ, ನಮ್ಮನ್ನು ಗೌರವಯುತವಾಗಿ ಕಾಣಿ ಎಂದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು