ಹಿಜಾಬ್​​ ಹಾಕಿಕೊಂಡು ಪರೀಕ್ಷೆಗೆ ಬಂದ್ರೆ ಅವಕಾಶ ಇಲ್ಲ – ಸಚಿವ ಬಿಸಿ ನಾಗೇಶ್

Team Newsnap
1 Min Read
Recruitment of 15 thousand graduate primary teachers: Provisional selection list released - Minister Nagesh 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ : ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ - ಸಚಿವ ನಾಗೇಶ್

ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಏನು ತೀಪು೯ ನೀಡುತ್ತದೆ ಅದನ್ನೇ ನಾವು ಪಾಲಿಸುತ್ತೇವೆ ಎಂದು ಪ್ರಾಥಮಿಕ ಹಾಗೂ ಫ್ರೌಡ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.

ಕಾರವಾರದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ನಾಗೇಶ್ , ಇಲ್ಲಿಯವರೆಗೆ ಹಿಜಾಬ್ ಹಾಕಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ಹಿಜಾಬ್​​​ಗೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಪರೀಕ್ಷೆಗೆ ಯಾರು ಅನುಪಸ್ಥಿತಿಯಾಗಬಾರದು. ಪರೀಕ್ಷೆ ಬರೆಯಲು ಯಾರು ಬರುವುದಿಲ್ಲವೋ ಅಂತವರಿಗೆ ಮತ್ತೆ ಅವಕಾಶ ಕೊಡುವುದಿಲ್ಲ ಎಂದರು.

ರಾಜ್ಯದಲ್ಲಿ 86 ಸಾವಿರ ಅಲ್ಪಸಂಖ್ಯಾತ ಮಕ್ಕಳಲ್ಲಿ 400-500 ಮಕ್ಕಳು ಮಾತ್ರ ಹಿಜಾಬ್ ಎಂದು ಕಾರಣ ಹೇಳಿ ಬರುತ್ತಿಲ್ಲ. ದೊಡ್ಡ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಶಾಲೆಗೆ ಬರುತ್ತಿರುವುದು ಖುಷಿಯ ಸಂಗತಿ ಎಂದು ಸಚಿವರು ತಿಳಿಸಿದ್ದಾರೆ.

Share This Article
Leave a comment