ನಾನು ಅಹಿಂದ ಸಮಾವೇಶ ಮಾಡುವುದಿಲ್ಲ- ಮಂಡ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Team Newsnap
2 Min Read

ಅಹಿಂದ ಸಮಾವೇಶ ಮಾಡುತ್ತೇನೆ ಅಂತ ಎಲ್ಲೂ ಹೇಳಿಲ್ಲ. ನಾವು ಪ್ರತಿ ಜಿಲ್ಲೆಯೂ ಕಾಂಗ್ರೆಸ್ ಸಮಾವೇಶ ಮಾಡುತ್ತೇವೆ. ಬೇರೆಯವರಿಗೆ ನನ್ನ ಬಗ್ಗೆ ಭಯ , ಕನವರಿಕೆ ಇದೆ ಎನ್ನುವುದು ನಂಗೆ ಗೊತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶನಿವಾರ ಹೇಳಿದರು.

ಮಂಡ್ಯದಲ್ಲಿ ಖಾಸಗಿ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ ,
ಕಾಂಗ್ರೆಸ್ ಮತ್ತು ನಾನು ಯಾವಾಗಲೂ ಅಹಿಂದ ಪರ . ಏಕೆಂದರೆ ಅಹಿಂದ ವರ್ಗದವರಿಗೆ ನ್ಯಾಯ ಸಿಗಬೇಕು
ಕಾಂಗ್ರೆಸ್ ಪಕ್ಷವೇ ಅಹಿಂದ ಪರ ಇದೆ ಎಂದು ಹೇಳಿದರು.

ಅಹಿಂದ ನನಗೆ ಗೊತ್ತಿಲ್ಲ ಎಂದು ಖರ್ಗೆ ಹೇಳಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರು ಎಂದೂ ಅಹಿಂದ ಸಮಾವೇಶ ಮಾಡಿಲ್ಲ.ಕಾಂಗ್ರೆಸ್ ಪಕ್ಷವೇ ಅಹಿಂದ ಪರ ಇದೆ.ಹೀಗಾಗಿ ಆ ರೀತಿ ಹೇಳಿರಬಹುದು ಎಂದರು.

ಗಂಭೀರ ರಾಜಕಾರಣಿ ಅಲ್ಲ :

ಎಂಎಲ್ ಸಿ ವಿಶ್ವನಾಥ್ ಒಬ್ಬ ಸೀರಿಯಸ್ ಪಾಲಿಟೀಷಿಯನ್ ಅಲ್ಲ.
ಆತನ ಬಗ್ಗೆ ನಾನು ಪದೇ ಪದೇ ಉತ್ತರ ಕೊಡಲ್ಲ. ನನ್ನ ಬಗ್ಗೆ ಅವರಿಗೆ ಭಯ ಇರಬೇಕು. ಹಾಗಾಗಿ ಈ ರೀತಿ ಪದೇ ಪದೇ ನನ್ನ ಕನವರಿಕೆ ಮಾಡಿಕೊಳ್ತಿದ್ದಾರೆ ಎಂದರು.

ಮೊದಲು ಪಕ್ಷ ಅಧಿಕಾರಕ್ಕೆ ಬರಲಿ :

ಸಿದ್ದರಾಮಯ್ಯರಿಂದ ಪದೇ ಪದೇ ಮುಂದಿನ ಸಿಎಂ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದು, ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು.
ಆ ನಂತರ ಶಾಸಕರು ಸಿಎಂ ಯಾರಾಗಬೇಕು ಎನ್ನುವುದನ್ನು ತೀರ್ಮಾನ ಮಾಡ್ತಾರೆ. ಬಳಿಕ ಹೈಕಮಾಂಡ್ ಮುದ್ರೆ ಹೊತ್ತುತ್ತದೆ.
ಇದು ಪಕ್ಷಗಳ ಪ್ರೊಸ್ಯೂಜರ್ ಎಂದು ಹೇಳಿದರು.

ರಾಜ್ಯ ಬಜೆಟ್ ಬಗ್ಗೆ ನಿರೀಕ್ಷೆಯೇ ಇಲ್ಲ:

ರಾಜ್ಯದ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ. ದುಡ್ಡಿಲ್ಲ, ಖಜಾನೆ ಖಾಲಿಯಾಗಿದೆ. 35 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ. ಸಾಲ, ಬಡ್ಡಿ, ಚಕ್ರ ಬಡ್ಡಿ ಮನ್ನಾ ಮಾಡೋದೆ ಆಗುತ್ತೆ.
ಇನ್ನೇನು ಉತ್ತಮ ಯೋಜನೆ ನೀಡಲು ಸಾಧ್ಯ? ತೈಲ ಬೆಲೆ ಹೆಚ್ಚಲು ಎಕ್ಸೈಸ್ ಡ್ಯೂಟಿ ಹೆಚ್ಚು ಮಾಡಿರೋದು ಕಾರಣ ಎಂದು ವ್ಯಾಖ್ಯಾನ ಮಾಡಿದರು.

ಕಾಂಗ್ರೆಸ್ ಕಾರ್ಯಕರ್ತರಿಂದ‌ ಅದ್ದೂರಿ ಸ್ವಾಗತ :

mandya s1

ಮಂಡ್ಯಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಮಂಡ್ಯ ದ ಮಹಾವೀರ ವೃತ್ತದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಜೆಸಿಬಿ ಮೂಲಕ ಪುಷ್ಪ ವೃಷ್ಠಿ ಹರಿಸಿ, ಸ್ವಾಗತಿಸಿದ ಕಾರ್ಯಕರ್ತರು ಜೈ ಕಾರ ಕೂಗಿದರು.

Share This Article
Leave a comment