ಕನ್ನಡ ಚಲನಚಿತ್ರ ರಂಗದ ಖ್ಯಾತ ನಟಿ ಡಾ ಎಂ ಲೀಲಾವತಿ ಐದು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ನಾ ನಿನ್ನ ಮರೆಯಲಾರೆ ಚಿತ್ರದಲ್ಲಿ ಚಿತ್ರದ ನಾಯಕಿಯ ತಾಯಿಯಾಗಿ ತನ್ನ ಮಗಳು ಪ್ರೇಮಿಸುವ ಹುಡುಗನನ್ನು ಅಳಿಯನನ್ನಾಗಿ ಅಂಗೀಕರಿಸದೇ ಆಕೆಗೆ ಬೇರೆ ಮದುವೆ ಮಾಡಿ ತನ್ನ ಪ್ರತಾಪ ತೋರಿ ಮಗಳ ಪ್ರೇಮ ವಿವಾಹದ ಕನಸನ್ನು ನುಚ್ಚುನೂರು ಮಾಡಿ ತನ್ನ ಇಚ್ಛೆಯಂತೆ ವಿಜಯ ಸಾಧಿಸುವ ಪಾತ್ರ ಆ ಕಾಲದಲ್ಲಿ ಇಡೀ ಯುವ ಸಮೂಹವನ್ನೇ ರೊಚ್ಚಿಗೆಬ್ಬಿಸಿತ್ತು ಎಂದರೆ ಆ ಪಾತ್ರದಲ್ಲಿ ಡಾ ಲೀಲಾವತಿ ಅವರ ಪರಕಾಯ ಪ್ರವೇಶ ಹೇಗಿತ್ತು ? ಎಂಬುದಕ್ಕೆ ಸಾಕ್ಷಿ.
ನಾಗರ ಹಾವು ಚಿತ್ರದಲ್ಲಿ ಮೇಷ್ಟ್ರ ಪತ್ನಿಯಾಗಿ, ಮೇಷ್ಟ್ರ ಅಚ್ಚುಮೆಚ್ಚಿನ ವಿದ್ಯಾರ್ಥಿಯನ್ನೇ ತನ್ನ ಮಗನನ್ನಾಗಿ ಕಂಡು ಮಕ್ಕಳಿಲ್ಲದ ತನ್ನ ಕೊರಗನ್ನು ಮುಚ್ಚಿಕೊಳ್ಳುವ ಆ ತಾಯಿಯ ಪಾತ್ರದ ಡಾ ಎಂ ಲೀಲಾವತಿ ಅವರ ಮನೋಜ್ಞ ಅಭಿನಯಕ್ಕೆ ಮನಸೋಲದವರೇ ಇಲ್ಲ !
ವೀರ ಕೇಸರಿ ಚಿತ್ರದಲ್ಲಿನ ಪ್ರಣಯ ಪಾತ್ರ, ಭಕ್ತ ಕುಂಬಾರ ಚಿತ್ರದ ಗೋರನ ಪತ್ನಿಯ ಪಾತ್ರ ಹಾಗೂ ಡಾ ಕೃಷ್ಣ ಚಿತ್ರದಲ್ಲಿ ತಾಯಿಯ ಪಾತ್ರಗಳಲ್ಲಿನ ಲೀಲಾವತಿ ಅವರ ಅತ್ಯದ್ಭುತ ಅಭಿನಯಕ್ಕೆ ಲೀಲಾವತಿ ಅವರೇ ಸಾಟಿ !
ಮದುವೆ ಮಾಡಿ ನೋಡು ಹಾಗೂ ಸಂತ ತುಕಾರಾಂ ಚಿತ್ರಗಳಲ್ಲಿನ ಅಭಿನಯಕ್ಕೆ ಲೀಲಾವತಿ ಅವರಿಗೆ ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ.
ತುಂಬಿದ ಕೊಡ, ಮಹಾತ್ಯಾಗ, ಭಕ್ತ ಕುಂಬಾರ, ಸಿಪಾಯಿ ರಾಮು ಹಾಗೂ ಗೆಜ್ಜೆ ಪೂಜೆ ಚಿತ್ರಗಳಲ್ಲಿನ ಅಭಿನಯಕ್ಕೆ ಲೀಲಾವತಿ ಅವರಿಗೆ ರಾಜ್ಯ ಪ್ರಶಸ್ತಿಗಳು ಸಂದಿವೆ.
ಕೆಲವೇ ಕ್ಷಣಗಳಲ್ಲಿ ಹಿರಿಯ ನಟಿಯ ಬೃಹತ್ ಸಾಧನೆಯನ್ನು ಪರಿಚಯಿಸಲಿರುವ ಈ ಸಾಕ್ಷ್ಯಚಿತ್ರ ಡಾ ಲೀಲಾವತಿ ಅವರಿಗೆ ಅರ್ಪಿಸಬಹುದಾದ ಶ್ರದ್ಧಾಂಜಲಿ.ಸ್ಯಾಂಡಲ್‌ವುಡ್ ಹಿರಿಯ ನಟಿ ಲೀಲಾವತಿ ಇನ್ನಿಲ್ಲ
More Stories
ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
ಮುದ್ದುಲಕ್ಷ್ಮಿ ಸೀರಿಯಲ್ ನಟ ಚರಿತ್ ಬಾಳಪ್ಪ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನ