December 22, 2024

Newsnap Kannada

The World at your finger tips!

ramya in mandya 1

ನಾನು ಮಂಡ್ಯದ ಗೌಡ್ತಿ, ಮಂಡ್ಯ ಜನರಿಗೆ ನಾನು ಚಿರ ಋಣಿ ; ರಮ್ಯಾ

Spread the love

ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಮಾಜಿ ಸಂಸದೆ ರಮ್ಯಾ, “ನಾನು ಮೂಲತಃ ಮಂಡ್ಯದವಳೇ ಆಗಿದ್ದು, ನಾನು ಮಂಡ್ಯದ ಗೌಡ್ತಿಯಾಗಿದ್ದೇನೆ. ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ,” ಎಂದು ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ.

“ನಾನು ಮಂಡ್ಯಕ್ಕೆ ಬರುತ್ತಾ ಇರುತ್ತೇನೆ. ಸೋಮವಾರವೂ ನಿಮಿಷಾಂಭ ದೇವಸ್ಥಾನಕ್ಕೆ ಬಂದಿದ್ದೆ. ಮಂಡ್ಯದಲ್ಲಿ ನನಗೆ ನೆಂಟರು ಇದ್ದಾರೆ. ಸಾಕಷ್ಟು ಬಾರಿ ನಾನು ಮಂಡ್ಯಕ್ಕೆ ಬಂದಿದ್ದೇನೆ. ಆದರೆ ಕ್ಯಾಮಾರಾ ಕಣ್ಣಿಗೆ ಎಲ್ಲೂ ಕಾಣಿಸಿಕೊಂಡಿಲ್ಲ,” ಎಂದರು. ಡಿಕೆ ಶಿವಕುಮಾರ್‌ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ – ಪ್ರಾಣಾಪಾಯದಿಂದ ಪಾರು

ಮಂಡ್ಯ ಜನರಿಗೆ ನಾನು ಚಿರ ಋಣಿ

ಮಂಡ್ಯ ಜನರಿಗೆ ನಾನು ಚಿರ ಋಣಿಯಾಗಿದ್ದೇನೆ. ಮಂಡ್ಯ ಜನರ ಜೊತೆ ನನ್ನ ಸಂಬಂಧ ಸದಾ ಇರುತ್ತದೆ. ರಾಜಕೀಯ ಅಂತಾ ಇಲ್ಲ, ಎಲ್ಲಾ ವಿಚಾರದಲ್ಲಿ ಮಂಡ್ಯದಲ್ಲಿ ಇರುತ್ತೇನೆ ಎಂದು ರಮ್ಯಾ ಹೇಳಿದರು.

ramya in mandya

ಅಂಬರೀಶ್ ಅಂತಿಮ ದರ್ಶನ ಬಗ್ಗೆ ಪ್ರತಿಕ್ರಿಯೆ

ರಮ್ಯಾ ಅವರು ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾದಾಗ ಅಂತಿಮ ದರ್ಶನಕ್ಕೆ ಬಾರದಿದ್ದಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಅಂಬರೀಶ್ ಅಭಿಮಾನಿಗಳು ಕೂಡ ರಮ್ಯಾ ವಿರುದ್ಧ ಕಿಡಿಕಾರಿದ್ದರು. ಇದಕ್ಕೆ ಸ್ವತಃ ನಟಿ ರಮ್ಯಾ ಅವರೇ ಸ್ಪಷ್ಟನೆ ನೀಡಿದ್ದಾರೆ.

ಅಂಬರೀಶ್ ಅಂತ್ಯಸಂಸ್ಕಾರಕ್ಕೆ ಬರದ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಆಗ ಟ್ಯೂಮರ್ ಬಂದಿತ್ತು. ನಾನು ಆಗ ಸರ್ಜರಿ ಮಾಡಿಸಿದ್ದೆ. ನನಗೆ ಪಬ್ಲಿಕ್ ಆಗಿ ಬಂದು ದುಃಖ ಹಂಚಿಕೊಳ್ಳುವ ಅಭ್ಯಾಸ ಇಲ್ಲ. ಬೇರೆಯವರು ಕ್ಯಾಮೆರಾ ಮುಂದೆ ಬಂದು ಹಂಚಿಕೊಳ್ಳುತ್ತಾರೆ, ನಾನು ಹಾಗೇ ಸಾರ್ವಜನಿಕವಾಗಿ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳಿದರು. ಕಾಂಗ್ರೆಸ್‍ನಿಂದ ಪ್ರಣಾಳಿಕೆ ಬಿಡುಗಡೆ – ಎನ್‍ಇಪಿ ಹಾಗೂ ಭಜರಂಗದಳ ನಿಷೇಧ !

“ನಾನು ಚಿಕ್ಕವಳಿದ್ದಾಗಿನಿಂದಲೂ ಸ್ವತಂತ್ರವಾಗಿ ಇದ್ದೇನೆ. ನಾನು ಏನೇ ಇದ್ದರೂ ಕೆಲಸದ ಬಗ್ಗೆ ಮಾತನಾಡುತ್ತೇನೆ ಅಷ್ಟೆ. ವೈಯಕ್ತಿಕ ವಿಚಾರಗಳನ್ನು ಮಾತನಾಡಲ್ಲ. ಹೀಗಾಗಿ ಎಲ್ಲರೂ ಏನೇನೋ ಹಬ್ಬಿಸುತ್ತಾರೆ. ಅಪಪ್ರಚಾರ ಮಾಡಿರುವುದು ನನಗೆ ಬೇಸರವಾಗಿದೆ,” ಎಂದು ತಿಳಿಸಿದರು.

“ನನಗೆ ಗೊತ್ತು ನಾನು ಯಾರು ಅಂತಾ. ನನಗೆ ತುಂಬಾ ನೋವಾಗಿದೆ, ಕೆಲವರು ತಪ್ಪು ತಿಳಿದುಕೊಂಡಿದ್ದಾರೆ. ಟ್ಯೂಮರ್ ಬಳಿಕ ನಾನು ಅದನ್ನು ಹಂಚಿಕೊಂಡಿದ್ದೆ. ನನಗೆ ತುಂಬಾ ತೊಂದರೆ ಆಯ್ತು. ಅದರ ಬಗ್ಗೆ ಹೇಳಿ ಸಿಂಪತಿ ತೆಗೆದುಕೊಳ್ಳುವುದಕ್ಕೆ ಇಷ್ಟಪಡಲ್ಲ,” ಎಂದು ರಮ್ಯಾ ಹೇಳಿದರು.

ಡಿಕೆ ಶಿವಕುಮಾರ್‌ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ – ಪ್ರಾಣಾಪಾಯದಿಂದ ಪಾರು

ರಾಜ್ಯ ಚುನಾವಣಾ ಪ್ರಚಾರಕ್ಕೆ ಮುಳಬಾಗಿಲಿಗೆ ತೆರಳುತ್ತಿದ್ದ KPCC ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂದು ಬೆಳಗ್ಗೆ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಡಿಕೆ ಶಿವಕುಮಾರ್‌ ಮುಳಬಾಗಿಲಿಗೆ ತೆರಳಲು ಹೆಲಿಕಾಪ್ಟರ್‌ ಏರಿದ್ದರು. ಜಕ್ಕೂರಿನಿಂದ ಹೆಲಿಕಾಪ್ಟರ್‌ ಟೇಕಾಫ್‌ ಆಗಿ ಹೊಸಕೋಟೆ ಬಳಿ ಹೋಗುತ್ತಿದ್ದಾಗ ಹದ್ದೊಂದು ಡಿಕ್ಕಿ ಹೊಡೆದಿದೆ. ಕಾಂಗ್ರೆಸ್‍ನಿಂದ ಪ್ರಣಾಳಿಕೆ ಬಿಡುಗಡೆ – ಎನ್‍ಇಪಿ ಹಾಗೂ ಭಜರಂಗದಳ ನಿಷೇಧ !

ಹದ್ದು ಡಿಕ್ಕಿ ಹೊಡೆದ ರಭಸಕ್ಕೆ ಹೆಲಿಕಾಪ್ಟರ್‌ ಮುಂದಿನ ಗಾಜು ಪುಡಿ ಪುಡಿಯಾಗಿದೆ. ಕೂಡಲೇ ಎಚ್ಚೆತ್ತ ಪೈಲಟ್‌ ಎಚ್‌ಎಎಲ್‌ನಲ್ಲಿ ಹೆಲಿಕಾಪ್ಟರ್‌ ಅನ್ನು ತುರ್ತು ಭೂಸ್ಪರ್ಷ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣಾ ತರಬೇತಿಗೆ ತೆರಳ್ತಿದ್ದ ಸರ್ಕಾರಿ ಬಸ್ ಪಲ್ಟಿ : ಸಿಬ್ಬಂದಿಗಳಿಗೆ ಗಾಯ

ಹೆಲಿಕಾಪ್ಟರ್‌ನಲ್ಲಿ 4 ಮಂದಿ ಪ್ರಯಣಿಸುತ್ತಿದ್ದರು. ಹೆಲಿಕಾಪ್ಟರ್‌ನಿಂದ ಇಳಿದ ಡಿಕೆ ಶಿವಕುಮಾರ್‌ ಕಾರು ಮೂಲಕ ಮುಳಬಾಗಿಲು ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!