ನಂಗೆ 5 ಬಾರಿ ಮರುಜನ್ಮ – ನನ್ನ ಜೀವನದ ಬಗ್ಗೆ ಕನಿಕರವಿರಲಿ : ಹೆಚ್‌ಡಿಕೆ

Team Newsnap
2 Min Read

ಬೆಂಗಳೂರು: ನಂಗೆ 5 ಬಾರಿ ಮರುಜನ್ಮ ಬಂದಿದೆ, ಈ ಬಾರಿ ಸ್ವಲ್ಪ ತಡ ಮಾಡಿದ್ದರೂ ಇವತ್ತು ನಿಮ್ಮ ಜೊತೆ ಮಾತನಾಡಲು ಆಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಘಾತಕಾರಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಪಾರ್ಶ್ವವಾಯು ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಚ್.ಡಿ ಕುಮಾರಸ್ವಾಮಿ ಅವರಿಂದು ಡಿಸ್ಚಾರ್ಜ್ ಆಗಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿಯೇ ಸುದ್ದಿಗಾರರ ಜೊತೆ ಮಾತನಾಡಿ ತಂದೆ-ತಾಯಿ ಅಶೀರ್ವಾದದಿಂದ ನಾನು ಇಲ್ಲಿದ್ದೇನೆ, ನನಗೆ ಪುನರ್ಜನ್ಮ ಬಂದಿದೆ. ದೇವರ ದಯೆಯಿಂದ ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.

ಆ ದಿನ ರಾತ್ರಿ 2 ಗಂಟೆ ವೇಳೆಗೆ ನನಗೆ ಎಚ್ಚರವಾಯ್ತು, ತಕ್ಷಣ ನನ್ನ ದೇಹದಲ್ಲಿ ಬದಲಾವಣೆ ಕಂಡುಬಂದಿತು, ಧ್ವನಿಯಲ್ಲೂ ಬದಲಾವಣೆ ಕಂಡುಬಂದಿತು. ಕೂಡಲೇ ಡಾ.ಮಂಜುನಾಥ್ ಹಾಗೂ ಡಾ.ಯತೀಶ್ ಅವರಿಗೆ ಕರೆ ಮಾಡಿ, ಬಿಡದಿಯ ತೋಟದಿಂದ 20 ನಿಮಿಷಕ್ಕೆ ಆಸ್ಪತ್ರೆಗೆ ಬಂದೆ ಎಂದು ಆಕ್ಷಣದಲ್ಲಾದ ಕಹಿ ಅನುಭವವನ್ನು ಹೇಳಿಕೊಂಡರು.

ನಾನಿಂದು ರಾಜಕೀಯ ಬಿಟ್ಟು ಕೆಲ ಮಾತನ್ನು ಮಾತನಾಡಬೇಕಿದೆ, ನನಗಾದ ಜೀವನ್ಮರಣದ ಹೋರಾಟದ ಬಗ್ಗೆ ಹೇಳಬೇಕಿದೆ. ತುಂಬಾ ಕ್ಲಿಷ್ಟಕರ ಸನ್ನಿವೇಶ ಎದುರಿಸಿದ್ದೇನೆ, ಈ ರೀತಿಯ ಆರೋಗ್ಯ ಸಮಸ್ಯೆಯಾದಾಗ ಯಾರೂ ನಿರ್ಲಕ್ಷ್ಯ ಮಾಡಬಾರದು.. ಗೋಲ್ಡನ್ ಅವರ್‌ನಲ್ಲಿ ನಾವು ಚಿಕಿತ್ಸೆ ಪಡೆಯದೇ ಇದ್ರೇ ಜೀವನ ಪರ್ಯಂತ ಮತ್ತೊಬ್ಬರ ಮೇಲೆ ಅವಲಂಬಿತರಾಗಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.

ರಾಜ್ಯದ ಸಾವಿರಾರು ಕುಟುಂಬಗಳ ಆಶೀರ್ವಾದ, ಪ್ರಾರ್ಥನೆಯಿಂದ ನಾನು ಮತ್ತೆ ಬಂದಿದ್ದೇನೆ, ವೈದ್ಯರು ನನಗೆ ಎಚ್ಚರಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ದಿನಚರಿ ಬದಲಾಗಲಿದೆ. ನನ್ನ ಜೀವನದ ಬಗ್ಗೆ ಸ್ವಲ್ಪ ಕನಿಕರದಿಂದ ನೀವೇಲ್ಲ ನೋಡಿ. ಮೊದಲ ರೀತಿ ನಿಮಗೆ ಸಿಗುವುದು ಕಷ್ಟವಾಗಬಹುದು. ನೀವು ನನ್ನ ಆರೋಗ್ಯ ಸ್ಥಿತಿ ಅರ್ಥ ಮಾಡಿಕೊಳ್ಳಿ. ನನ್ನ ಜೀವನ ಶೈಲಿ ಬದಲಿಸಿಕೊಳ್ಳಲು ವೈದ್ಯರು ಸೂಚಿಸಿದ್ದಾರೆ, ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.ಮಂಡ್ಯ – ಹಲ್ಲೇಗೆರೆಗೆ ಶಾಸಕ ರವಿಕುಮಾರ್ ಗಣಿಗ ಭೇಟಿ – ಪರಿಶೀಲನೆ

ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಒಂದು ಸುದ್ದಿ ನೋಡ್ತಾ ಕುಳಿತಿದ್ದೆ. ಆಗ ನಾನು ಮಾನಸಿಕ ಆಘಾತಕ್ಕೆ ಒಳಗಾಗಿದ್ದೆ. ಆಗ ಮೊದಲ ಬಾರಿ ಸ್ಟ್ರೋಕ್ ಆಗಿತ್ತು, ಇದು 2ನೇ ಬಾರಿ. ನಾನು ಬೆಳಗ್ಗೆ ಹೋದ್ರೆ ಆಯ್ತು ಅಂತಾ ನಿರ್ಲಕ್ಷ್ಯ ಮಾಡಿದ್ದರೆ ಲೈಫ್‌ಟೈಂ ಹಾಸಿಗೆ ಹಿಡಿಯುತ್ತಿದೆ ಎಂದು ಕಹಿ ಅನುಭವ ಹಂಚಿಕೊಂಡಿದ್ದಾರೆ.

Share This Article
Leave a comment