ನನಗೆ ವಯಸ್ಸಾಗಿದೆ ಎಂದು ಅಸಡ್ಡೆಯಿಂದ ಕೂರುವ ವ್ಯಕ್ತಿ ನಾನಲ್ಲ : ಮಾಜಿ ಪ್ರಧಾನಿ‌

Team Newsnap
2 Min Read

ನನಗೆ ವಯಸ್ಸಾಗಿದೆ ಎಂದು ಅಸಡ್ಡೆಯಿಂದ ಕೂರುವ ವ್ಯಕ್ತಿ ನಾನಲ್ಲ. ನಾನು , ನನ್ನ ಜಿಲ್ಲೆಯಿಂದಲೇ ಪ್ರವಾಸ ಆರಂಭಿಸಿದ್ದೇನೆ. ರಾಜ್ಯದ ಎಲ್ಲಾ ಕಡೆ ಪ್ರವಾಸ ಮಾಡುತ್ತೇನೆ. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಹೈದರಾಬಾದ್, ಮುಂಬೈ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು‌ ಶನಿವಾರ ಪ್ರಕಟಿಸಿದರು.

ಹಾಸನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ದೇವೇಗೌಡರು, ಮುಂದಿನ ದಿನಗಳಲ್ಲಿ ತಾ ಪಂ, ಜಿ.ಪಂ ‌ ಚುನಾವಣೆ ಇದೆ. ನಮ್ಮ ಜಿಲ್ಲೆಯಿಂದ‌ ಆರಂಭಿಸಿ ರಾಜ್ಯಾದ್ಯಂತ ಪ್ರವಾಸ ಮಾಡುವೆ ಪಕ್ಷದ ಸದಸ್ಯತ್ವ ಇಲ್ಲದವರಿಗೆ ಬಿ ಫಾರಂ‌ ಕೊಡುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದೇನೆ . ಅಲ್ಲದೇ, ಜಿಲ್ಲಾ, ತಾಲ್ಲೂಕು ಮುಖಂಡರು, ಪಕ್ಷದ ಬಗ್ಗೆ ಬದ್ದತೆ ಇರುವವರ ಜೊತೆ ಮಾತ್ರ ಚರ್ಚೆ ಮಾಡುತ್ತೇನೆ ಎಂದರು.

ಶಾಸಕ ಜಿ ಟಿ ದೇವೇಗೌಡ ಪಕ್ಷ ತೊರೆಯುವ ಬಗ್ಗೆ ಪ್ರತಿಕ್ರಿಯೆ ನೀಡಿ,
ಜಿ ಟಿ ದೇವೇಗೌಡ ಸಿದ್ಧರಾಮಯ್ಯ ನವರೊಂದಿಗೆ ಮಾತನಾಡಿ‌ ತಮಗೆ, ತಮ್ಮ ಮಗನಿಗೆ ಟಿಕೆಟ್ ನೀಡಿದ್ರೆ ಕಾಂಗ್ರೆಸ್ ಗೆ ಬರ್ತೀನಿ ಅಂತ ಹೇಳಿದ್ದರೆಂದು ಗೊತ್ತಾಗಿದೆ. ‌ ಸಿದ್ದರಾಮಯ್ಯನವರು ಸಹ ಈ ಕುರಿತು ಹೈಕಮಾಂಡ್ ಗೆ ತಿಳಿಸಿದ್ದರಂತೆ ಎಂದು ತಿಳಿದುಬಂದಿದೆ. ನೋಡೋಣ ಏನು ಆಗುತ್ತದೆ ಎನ್ನುವುದನ್ನು ಕಾಯೋಣ ಎಂದರು.

ಗುಬ್ಬಿ ಶ್ರೀನಿವಾಸ್ ದೂರವಾಣಿ ಮೂಲಕ ನನ್ನ ಜೊತೆ ಮಾತನಾಡಿದ್ದಾರೆ. ಕೆಲವರು ಊಹಾಪೋಹ ಸುದ್ದಿ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡೋದಿಲ್ಲ ಎಂದು ಹೇಳಿದ್ದಾರೆ ಎಂದು ದೇವೇಗೌಡರು ತಿಳಿಸಿದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರವಾಸ ಕುರಿತಂತೆ ಮಾತಮಾಡಿದ ಗೌಡರು, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಭೆ ನಡೆದಿದೆ. ಆ ಸಭೆಯಲ್ಲಿ ಎಷ್ಟು ಜನ ಇದ್ರು ಎಂದು ಗಮನಿಸಿದ್ರೆ ನಿಮಗೆ ತಿಳಿಯುತ್ತೆ ಎಂದು ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ಕೊಟ್ಟು, ಜೆಡಿಎಸ್ ಪಕ್ಷ ಮುಳುಗುತ್ತಿದೆ ಎಂಬ ಅರುಣ್ ಸಿಂಗ್ ಹೇಳಿಕೆಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ ಎಂದು ದೇವೇಗೌಡರು ಹೇಳಿದರು.‌

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೈಲ‌ ಬೆಲೆ ಸೆಸ್ ಇಳಿಸುವಂತೆ ಸಚಿವರು ಒತ್ತಾಯಿಸಿದ್ದಾರೆಂದು ಗೊತ್ತಾಯಿತು. ಸರ್ಕಾರ ಸ್ಟೇಟ್ ಟ್ಯಾಕ್ಸ್ ನ ರದ್ದು ಮಾಡಬೇಕು. ರಾಜ್ಯದ ಆರ್ಥಿಕ ವ್ಯವಸ್ಥೆ ಸರಿಯಿದ್ದರೆ, ಕೇಂದ್ರ ಸರ್ಕಾರ ರಿಯಾಯಿತಿ ಕೊಡದಿದ್ದರು ಕಡಿಮೆ ಮಾಡಬಹುದು ಎಂದು ಹೇಳಿದರು.

ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಎಲ್ಲಾ ಇಲಾಖೆಯೊಳಗೆ ಹಣ ಬಿಡುಗಡೆ ಬಾಕಿ ಇದೆ.. ಕೇಂದ್ರ ಸರ್ಕಾರದ್ದು ಅಷ್ಟೇನೇ ಬಾಕಿ ಇದೆ ಎಂದರು.

Share This Article
Leave a comment