ನಾನು 2 ಕ್ಷೇತ್ರಗಳಲ್ಲಿ ಸ್ಪರ್ಧಿಸಲ್ಲ : ಮಂಡ್ಯದಲ್ಲಿ ಸಾಮಾನ್ಯ ಕಾರ್ಯಕರ್ತ ಕಣಕ್ಕೆ – ಎಚ್ ಡಿ ಕೆ

Team Newsnap
1 Min Read

ಈ ಬಾರಿಯ ಚುನಾವಣೆಯಲ್ಲಿ ನಾನು 2 ಕ್ಷೇತ್ರಗಳಲ್ಲಿ ಸ್ಪರ್ಧಿಸಲ್ಲ. ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಿದ್ರೂ ನಾನು ಸ್ಪರ್ಧಿಸಲ್ಲ. ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕೆ ಇಳಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ ಬಗ್ಗೆ ಕಾಂಗ್ರೆಸ್‌ , ಬಿಜೆಪಿಗೆ ಆತಂಕ ಶುರುವಾಗಿದೆ. ಹೀಗಾಗಿ ಬಿಜೆಪಿಯವರು ಕಾಂಗ್ರೆಸ್‌ ಬಿ ಟೀಂ ಹೆಡಿಎಸ್‌ ಅಂತಾರೆ. ನಾವು ಕನ್ನಡಿಗರ ಬಿ ಟೀಂ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರು, ಮೈಸೂರಿನಲ್ಲಿ ಹೆಚ್.ಡಿ ದೇವೇಗೌಡ ರೋಡ್‌ ಶೋ ಇಲ್ಲ. ವೈದ್ಯರ ಸಲಹೆ ಮೇರೆಗೆ ರೋಡ್‌ ಶೋ ರದ್ದು ಮಾಡಲಾಗಿದೆ . ಅದರ ಬದಲು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರೋಡ್‌ ಶೋರ ಮಾಡುತ್ತೇವೆ ಎಂದರು.

ಕಾಂಗ್ರೆಸ್‌ನವರದ್ದು ಗ್ಯಾರಂಟಿ ಕಾರ್ಡ್‌ ಅಲ್ಲ , ಡೂಪ್ಲಿಕೇಟ್‌ ಕಾರ್ಡ್‌ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್‌ , ಬಿಜೆಪಿ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡುವುದಿಲ್ಲ. ಟೀಕೆಯಿಂದ ಜನರಿಗೆ ಯಾವುದೇ ಪ್ರಯೋಜನೆಗಳು ಆಗುವುದಿಲ್ಲ.ಕೇವಲ37 ಶಾಸಕರನ್ನು ಇಟ್ಟುಕೊಂಡೇ ನಾನು ಕೆಲಸ ಮಾಡಿದೆ. ಕಾಂಗ್ರೆಸ್‌ ಎಲ್ಲಾ ಭಾಗ್ಯ ಮುಂದುವರಿಸಿ ರೈತರ ಸಾಲಮನ್ನಾ ಮಾಡಿದೆ. ಈ ಬಿಜೆಪಿ ಸರ್ಕಾರ 2 ಲಕ್ಷ 35 ಸಾವಿರ ಕುಟುಂಬಕ್ಕೆ ಹಣ ಕೊಟ್ಟಿಲ್ಲ.

ಬಿಜೆಪಿ ಸಮಾವೇಶಕ್ಕೆ ಜನ ಕರೆತರಲು ಜಿಲ್ಲಾಧಿಕಾರಿ, ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದ್ದರು. ನಾನು ಕೊಡ್ತಿರೋದು ಸರ್ಕಾರದ ಆಸ್ತಿ ದ್ವಿಗುಣಗೊಳಿಸುವ ಕಾರ್ಯಕ್ರಮ ಮಾಡುತ್ತಿದ್ದೇನೆ ಎಂದು ಹೆಚ್.‌ ಡಿ ಕುಮಾರಸ್ವಾಮಿ ಹೇಳಿದರು.ಇದನ್ನು ಓದಿ –ಹಿಂದುತ್ವದ ಬಗ್ಗೆ ಪೋಸ್ಟ್‌ : ನಟ ಚೇತನ್ ಬಂಧನ

Share This Article
Leave a comment