February 21, 2026

Newsnap Kannada

The World at your finger tips!

shamanuru

ಸಿದ್ದರಾಮಯ್ಯ, DKS ಜೊತೆ ನಾನು ಕೂಡ ಕಾಂಗ್ರೆಸ್​ C M ಅಭ್ಯರ್ಥಿನೇ : ಶಾಮನೂರು ಶಿವಶಂಕರಪ್ಪ

Spread the love

ಕಾಂಗ್ರೆಸ್​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಾನೂ ಕೂಡ ಕಾಂಗ್ರೆಸ್​​ ಸಿಎಂ ಅಭ್ಯರ್ಥಿ ಎಂದು ಹೇಳಿದ್ದಾರೆ.

ಸುದ್ದಿಗಾರರಜೊತೆ ಮಾತಾಡಿದ ಶಾಮನೂರು, ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್​​ ಮಾತ್ರವಲ್ಲ ನಾನು ಮುಂದಿನ ಕಾಂಗ್ರೆಸ್​ ಸಿಎಂ ಆಕಾಂಕ್ಷೆಯೇ ಎಂದರು.

ನಾನು ಕೂಡ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನನ್ನ ಬಳಿಯೂ ಹಣ ಮತ್ತು ಶಕ್ತಿ ಎರಡು ಇದೆ. ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದರೆ ನಾನು ಸಿಎಂ ಆಕಾಂಕ್ಷಿ ಎಂದು ಹೇಳಿದರು.

ದಾವಣಗೆರೆ ಉತ್ತರದಿಂದ ಸ್ಪರ್ಧೆ ಮಾಡುವ ಕುರಿತು ಸಿಎಂ ಬೊಮ್ಮಾಯಿ ನನ್ನ ಜೊತೆ ಮಾತನಾಡಿಲ್ಲ. ಅವರು ಬಿಜೆಪಿ ಪಕ್ಷದವರು, ನನ್ನೊಂದಿಗೆ ಯಾಕೆ ಮಾತಾಡ್ತಾರೆ.

ಏಪ್ರಿಲ್ 16ನೇ ರಂದು ನನ್ನ ಮೊಮ್ಮಗಳ ಮದುವೆ ಇದೆ, ಅದಕ್ಕೆ ಬೊಮ್ಮಾಯಿ ಬರುತ್ತಾರೆ ಎಂದು ಶಾಮನೂರು ಹೇಳಿದರು.

error: Content is protected !!