December 29, 2024

Newsnap Kannada

The World at your finger tips!

ashith

ಚಂದನವನದಲ್ಲಿ ನನಗೂ ‘ಮೀಟೂ ‘ ಅನುಭವ ಆಗಿದೆ : ನಟಿ ಆಶಿತಾ

Spread the love

ಚಂದವನದಲ್ಲಿ ಮೀಟೂ ಸದ್ದು ಮತ್ತೆ ಕೇಳಿ ಬರುತ್ತಿದೆ. ರೋಡ್ ರೋಮಿಯೋ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ, ಇದೀಗ ಸಿನಿಮಾ ರಂಗದಿಂದಲೇ ದೂರವಾಗಿರುವ ನಟಿ ಆಶಿತಾ ತಮಗಾದ ಮೀ ಟು ಕಹಿ ಅನುಭವಗಳನ್ನು ನಿರ್ದೇಶಕ ರಘುರಾಮ್ ನಡೆಸಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಬಾ ಬಾರೋ ರಸಿಕ, ಆಕಾಶ್, ತವರಿನ ಸಿರಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಆಶಿತಾ, ತಮಗಾದ ಕಹಿ ಅನುಭವಗಳ ಕಾರಣದಿಂದಾಗಿಯೇ ಚಿತ್ರರಂಗದಿಂದ ದೂರವಾಗಿದ್ದಾರಂತೆ. ಸಿನಿಮಾದಲ್ಲಿ ಅವಕಾಶ ಸಿಗಲು, ಸಲುಗೆ ಇಂದ ಇರಬೇಕು. ನಾವು ಹೇಳಿದಂತೆ ಕೇಳು ಎನ್ನುವ ಪದಗಳಿಂದ ಒತ್ತಾಯ ಮಾಡಿದ ಕಾರಣದಿಂದಾಗಿ ಚಿತ್ರರಂಗವನ್ನೇ ತೊರೆಯಬೇಕಾಯಿತು ಎಂದು ಹೇಳಿದ್ದಾರೆ. ನಾಚಿಕೆ ಇಲ್ಲದೇ ನೇರವಾಗಿಯೇ ಕೇಳಿದ ನಿರ್ದೇಶಕನ ಪ್ರವೃತ್ತಿಯನ್ನು ಆಶಿತ ತೆರೆದಿಟ್ಟಿದ್ದಾರೆ. ಕೆಆರ್ ಪೇಟೆಯ ತ್ರಿವೇಣಿ ಸಂಗಮದ ಮಹಾ ಕುಂಭಮೇಳಕ್ಕೆ ಯುಪಿ ಸಿಎಂ ಯೋಗಿಆದಿತ್ಯನಾಥ

ಸಿನಿಮಾ ರಂಗದಿಂದ ದೂರವಾಗಿದ್ದಕ್ಕೆ ನನಗೇನೂ ಬೇಸರವಿಲ್ಲ. ಆದರೆ, ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ಮೇಲೂ ನನಗೆ ಕೆಟ್ಟ ಅನುಭವಗಳು ಆದವು. ಆದರೆ, ನಾನು ಅದಕ್ಕೆ ಆಸ್ಪದ ಕೊಡಲಿಲ್ಲ. ನನಗೆ ಅಂತಹ ಅವಕಾಶವೂ ಬೇಕಾಗಿರಲಿಲ್ಲ. ಆ ನಿರ್ದೇಶಕರ ಹೆಸರು ಹೇಳುವುದು ಬೇಡ, ಅವರು ತಮ್ಮೊಂದಿಗೆ ನನ್ನನ್ನು ಸಲುಗೆಯಿಂದ ಇರಲು ಹೇಳಿದರು. ಅದಕ್ಕೆ ಒಪ್ಪದಾಗ ಏನಲ್ಲ ಅವಮಾನಗಳನ್ನು ಮಾಡಿದ್ದರು. ಟೇಕ್ ಚೆನ್ನಾಗಿ ಬಂದರೂ, ಮತ್ತೆ ರಿಟೇಕ್ ಮಾಡಿಸುತ್ತಿದ್ದರು. ಇದೆಲ್ಲದರಿಂದ ನಾನು ಬೇಸತ್ತಿದ್ದೆ ಎಂದು ಅವರು ಮಾತನಾಡಿದ್ದಾರೆ.

ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ನನ್ನಂತವಳಿಗೆ ಹೀಗಾದರೆ ಹೊಸ ಹುಡುಗಿಯರು ಇನ್ನೆಷ್ಟು ಸಂಕಟ ಪಟ್ಟಿದ್ದಾರೋ ಗೊತ್ತಿಲ್ಲ. ಈಗಲೂ ನನಗೆ ನಟಿಸುವುದಕ್ಕೆ ಆಸಕ್ತಿ ಇದೆ. ಆದರೆ, ನನಗೆ ಟೀಮ್ ಇಷ್ಟವಾಗಬೇಕು ಮತ್ತು ನನಗೊಪ್ಪುವ ಪಾತ್ರ ಸಿಗಬೇಕು ಎಂದು ಹೇಳುವ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ವಾಪಸ್ಸಾಗುವ ಕುರಿತು ಅವರು ಮಾತನಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!