ಅಲಯನ್ಸ್ ವಿವಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಅವರನ್ನು ಆನೇಕಲ್ ಪೊಲೀಸರು ಬಂಧಿಸುವ ಮುನ್ನವೇ ಎಸ್ಕೇಪ್ ಆಗಿದ್ದಾರೆ.
ಕೋರಮಂಗಲದಲ್ಲಿರುವ ಸ್ವರ್ಣಲತಾ ಮನೆಗೆ ಬೀಗ ಹಾಕಲಾಗಿದೆ. ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಹೀಗಾಗಿ ಬಂಧನದಿಂದ ತಪ್ಪಿಸಿಕೊಳ್ಳಲು ಅವರು ಕೇರಳಕ್ಕೆ ಎಸ್ಕೇಪ್ ಆಗಿದ್ದಾರೆಂದು ಹೇಳಲಾಗಿದೆ.
ತಮಗೆ ನಿರೀಕ್ಷಣಾ ಜಾಮೀನು ಸಿಗುವತನಕ ಪೊಲೀಸರ ಕೈಗೆ ಸಿಗದಂತೆ ಸ್ವರ್ಣಲತಾ ಎಸ್ಕೇಪ್ ಆಗಿದ್ದಾರೆ, ಆನೇಕಲ್ ಪೊಲೀಸರು ಅವರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಸ್ವರ್ಣಲತಾರನ್ನು ಬಂಧನ ಮಾಡದಂತೆ ಪ್ರಭಾವಿ ಸಚಿವರಿಂದಲೂ ಕೂಡ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆನೇಕಲ್ ಪೊಲೀಸರಿಗೆ ಹಲವು ಬಾರಿ ಪ್ರಭಾವಿ ಸಚಿವರು ಕರೆ ಕೂಡ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ಕೆಆರ್ ಪೇಟೆಯ ತ್ರಿವೇಣಿ ಸಂಗಮದ ಮಹಾ ಕುಂಭಮೇಳಕ್ಕೆ ಯುಪಿ ಸಿಎಂ ಯೋಗಿಆದಿತ್ಯನಾಥ
ಖ್ಯಾತ ರಾಜಕಾರಣಿಯೊಬ್ಬರಿಗೆ ಅಲೆಯನ್ಸ್ ವಿಶ್ವ ವಿದ್ಯಾಲಯ ಮಾರಿಸಲು ಸ್ವರ್ಣಲತಾ ಮುಂದಾಗಿದ್ದರು ಎನ್ನುವ ಕಾರಣಕ್ಕಾಗಿ ಅವರ ಮೇಲೆ ದೂರು ದಾಖಲಾಗಿದೆ. ಇದರ ಹಿಂದೆ ನೂರಾರು ಕೋಟಿ ಡೀಲ್ ಕೂಡ ಇದೆ ಎಂದು ಹೇಳಲಾಗುತ್ತಿದೆ. ಮಧುಕರ್ ಅಂಗೂರ್ ಅವರಿಂದ ಯುನಿವರ್ಸಿಟಿ ಮಾರಾಟಕ್ಕೆ ಸ್ವರ್ಣಲತಾ ಡೀಲ್ ಕುದುರಿಸಿದ್ದರು ಎನ್ನಲಾಗಿದೆ.
More Stories
ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
ಹೇಮಂತ್ ನಿಂಬಾಳ್ಕರ್ ವಾರ್ತಾ ಇಲಾಖೆ ಕಮೀಷನರ್ ನೇಮಕ
ಬಾಡಿಗೆದಾರರಿಗೂ 200 ಯುನಿಟ್ ಉಚಿತ ವಿದ್ಯುತ್