December 23, 2024

Newsnap Kannada

The World at your finger tips!

dks

ಇಡಿಗೆ ದಾಖಲೆಗಳನ್ನು ಸಲ್ಲಿಸಲು ನಾನು ಒಪ್ಪಿದ್ದೇನೆ: ಡಿ.ಕೆ.ಶಿವಕುಮಾರ್

Spread the love

ಕೆಪಿಸಿಸಿ ( KPCC ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ( D K Shivkumar ) ಮತ್ತು ಸಹೋದರ, ಸಂಸದ ಡಿ.ಕೆ.ಸುರೇಶ್ ಅವರನ್ನು ಶುಕ್ರವಾರ. 3 ಗಂಟೆಗಳ ಕಾಲ ಇಡಿ ( ED ) ವಿಚಾರಣೆ ನಡೆಸಿದೆ.

ಯಂಗ್ ಇಂಡಿಯಾ ( Young India ) ಪ್ರೈವೇಟ್ ಲಿಮಿಟೆಡ್‌ಗೆ ಇಬ್ಬರು ಸೇರಿ 25 ಲಕ್ಷರು ದೇಣಿಗೆ ಗೆ ನೀಡಿ ವಿಚಾರ ಹಾಗೂ ಹಣಕಾಸಿನ ಕೊಡುಗೆಗೆ ಸಂಬಂಧಿಸಿದ ತನಿಖೆಗೆ ಸಂಸ್ಥೆ ಕರೆಸಿತ್ತು.ಇದನ್ನು ಓದಿ –SC/ST ಮೀಸಲಾತಿ ಹೆಚ್ಚಳ: ನಾಳೆಯೇ ಅಂತಿಮ ಮುದ್ರೆ- ಸಿಎಂ ಬೊಮ್ಮಾಯಿ

ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಹಣಕಾಸಿನ ಕೊಡುಗೆಗೆ ಸಂಬಂಧಿಸಿದ ತನಿಖೆಗೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ಸಂಬಂಧಿಸಿದಂತೆ ನನ್ನಿಂದ ಕೇಳಲಾದ ದಾಖಲೆಗಳನ್ನು ಸಲ್ಲಿಸಲು ನಾನು ಒಪ್ಪಿದ್ದೇನೆ ಎಂದು ವಿಚಾರಣೆ ಮುಗಿದ ಬಳಿಕ ಡಿ.ಕೆ.ಶಿವಕುಮಾರ್ ( D K Shivkumar )ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇಡಿಯಿಂದ ನನಗೆ ಸಮನ್ಸ್ ಬಂದಿತ್ತು. ಅ 23 ರ ನಂತರ ನನ್ನನ್ನು ಮತ್ತು ನನ್ನ ಸಹೋದರ ಡಿಕೆ ಸುರೇಶ್ ಇಬ್ಬರನ್ನೂ ಕರೆಯುವಂತೆ ನಾನು ಅವರಿಗೆ ವಿನಂತಿಸಿದ್ದೇವು. ಆದರೆ ಸಂಬಂಧಪಟ್ಟ ಅಧಿಕಾರಿಯು ಅವರ ಮುಂದೆ ಹಾಜರುಪಡಿಸುವಂತೆ ಸೂಚಿಸಿದರು.

ಹಾಗಾಗಿ ನಾವು ರಾಹುಲ್ ಗಾಂಧಿ ( Rahul Gandhi )ಅವರ ನೇತೃತ್ವ ದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯನ್ನು ಮಧ್ಯದಲ್ಲಿ ಬಿಟ್ಟು ಇಲ್ಲಿಗೆ ಬರಬೇಕಾಯಿತು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Copyright © All rights reserved Newsnap | Newsever by AF themes.
error: Content is protected !!