ಕಳೆದ 9 ತಿಂಗಳ ಹಿಂದೆ ಮೃತಪಟ್ಟಿದ್ದ ಮಹಿಳೆ ವಾಮಾಚಾರಕ್ಕೆ ಬಲಿಯಾಗಿ ಪತಿಯಿಂದಲೇ ಕೊಲೆಯಾದ ಆಘಾತಕಾರಿ ಘಟನೆ ಈಗ ಬೆಳಕಿಗೆ ಬಂದಿದೆ.
ದಾವಣಗೆರೆ ಜಿಲ್ಲೆಯ ರಾಮೇಶ್ವರ ಗ್ರಾಮದ ಡಾ.ಚನ್ನೇಶಪ್ಪ ಮತ್ತು ಹಿರೇಕೆರೂರಿನ ಶಿಲ್ಪಾಗೆ ಎಂಬುವವರಿಗೆ 18 ವರ್ಷಗಳ ಹಿಂದೆ ಮದುವೆಯಾಗಿತ್ತು.
ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿದ್ದ ಚನ್ನೇಶಪ್ಪನಿಗೆ ವಧು ದಕ್ಷಿಣೆಯಾಗಿ 700 ಗ್ರಾಂ ಬಂಗಾರ, 1 ಕೆ ಜಿ ಬೆಳ್ಳಿ, 7 ಲಕ್ಷ ನಗದು ನೀಡಲಾಗಿತ್ತು. ಇಷ್ಟೆಲ್ಲಾ ಹಣ, ಬಂಗಾರ ಕೊಟ್ಟು ಮದುವೆ ಮಾಡಿದ್ದರೂ ಕೂಡ ಪಾಪಿ ಪತಿಗೆ ನಿಧಿಯ ಆಸೆ ಇತ್ತು
ಪತ್ನಿಯನ್ನು ಬಲಿ ಕೊಡಲು ಸಜ್ಜಾಗಿದ್ದ ಆರೋಪಿ ವೃತ್ತಿಯಲ್ಲಿ ವೈದ್ಯನಾಗಿದ್ದರಿಂದ ಔಷಧಿಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದ.
ಈ ವೇಳೆ ಪತ್ನಿಗೆ ಹೈಡೋಸ್ ಇಂಜೆಕ್ಷನ್ ನೀಡಿ ಸಾಯಿಸಿದ್ದ. ಆ ಬಳಿಕ ತನ್ನ ಪತ್ನಿ ಲೋ ಬಿಪಿಯಿಂದಾಗಿ ಸಾವನ್ನಪ್ಪಿದ್ದಾಳೆ ಎಂದು ಕತೆ ಕಟ್ಟಿದ್ದ
ನಿಮ್ಮ ಮಗಳು ತೀರಿ ಹೋಗಿದ್ದಾಳೆ ಅಂತ ಪತಿ ಚನ್ನೇಶಪ್ಪ ಹೆಂಡತಿಯ ಪೋಷಕರಿಗೆ ಕರೆ ಮಾಡಿ ಹೇಳಿದ್ದ. ಶಿಲ್ಪಾ ತಂದೆ ತಾಯಿ ಬಂದು ನೋಡಿದಾಗ ಭುಜಕ್ಕೆ ಸೂಜಿ ಚುಚ್ಚಿದ ಗಾಯಗಳಾಗಿರೋದನ್ನ ಗಮನಿಸಿದ್ದಾರೆ.
ಅನುಮಾನಗೊಂಡು ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ ಶವದ ಮರಣೋತ್ತರ ಪರೀಕ್ಷೆ ನಡೆಸುವಂತೆ ಒತ್ತಾಯ ಮಾಡಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಲು ಸೂಚಿಸಿದ್ದಾರೆ. ಜೊತೆಗೆ ಎಫ್ಎಸ್ಎಲ್ಗೂ ಈ ಕುರಿತು ಮಾಹಿತಿ ನೀಡಿ ತನಿಖೆಗೆ ಸೂಚಿಸಿದ್ದಾರೆ.
ಸದ್ಯ ಎಫ್ಎಸ್ಎಲ್ ವರದಿ ಪೊಲೀಸರ ಕೈ ಸೇರಿದ್ದು ಹೈಡೋಸ್ ಇಂಜೆಕ್ಷನ್ನಿಂದಾಗಿ ಮೃತಪಟ್ಟಿರೋದು ದೃಢವಾಗಿದೆ. ಇನ್ನು ವರದಿ ಕಂಡು ಆರೋಪಿ ಪತಿಯನ್ನು ವಿಚಾರಣೆ ನಡೆಸಿದಾಗ ಈ ಕೃತ್ಯ ಎಸಗಿರೋದಾಗಿ ಒಪ್ಪಿಕೊಂಡಿದ್ದಾನೆ. ಹೊನ್ನಾಳಿ ಪೊಲೀಸರು ತನಿಖೆ ಮುಂದುರೆಸಿದ್ದಾರೆ
- ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
- ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
- ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು