ಮಹಾರಾಷ್ಟ್ರ : ಕಷ್ಟಪಟ್ಟು ಕೆಲಸ ಮಾಡಿ ಹಣ ಸಂಪಾದನೆ ಮಾಡಿರುವ ಎಷ್ಟೋ ಸುದ್ದಿಗಳನ್ನು ಕೇಳಿದ್ದೇವೆ.ಆದರೆ ಇಲ್ಲೊಬ್ಬ ಪತ್ನಿಯ ಆಸೆ ಪೂರೈಸಲು ಕಳ್ಳನಾದ ಘಟನೆ ನಡೆದಿದೆ.
ಬೆಲೆ ಬಾಳುವ ವಸ್ತುಗಳ ಮೇಲೆ ಪತ್ನಿಯ ಮೋಹಕ್ಕೆ ಒಳಗಾಗಿ ಕಳ್ಳನಾಗಿದ್ದ ಯುವಕ ಲಲಿತ್ , ಬೈಕ್ ಕಳ್ಳತನದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ಆರೋಪಿ ಲಲಿತ್ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ಮದುವೆಯ ನಂತರ ಕುಟುಂಬದ ಆರ್ಥಿಕ ಸಮಸ್ಯೆಗಳು ಹೆಚ್ಚಾದ ಕಾರಣ ಮನೆಯ ಖರ್ಚನ್ನು ನಿಭಾಯಿಸಲು ಮತ್ತು ಹೆಂಡತಿಯ ಹವ್ಯಾಸಗಳನ್ನು ಪೂರೈಸಲು ದ್ವಿಚಕ್ರ ವಾಹನಗಳನ್ನು ಕದಿಯಲು ಪ್ರಾರಂಭಿಸಿದ್ದಾನೆ.
12ನೇ ತರಗತಿವರೆಗೆ ಓದಿರುವ ಲಲಿತ್ ,ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಗ್ರಾಮಾಂತರ ಪ್ರದೇಶದಲ್ಲಿ ಮಾರಾಟ ಮಾಡಲು ಆರಂಭಿಸಿದ್ದಾನೆ.
ಪೊಲೀಸರ ಮಾಹಿತಿಯ ಪ್ರಕಾರ, ಪತ್ನಿಯ ದುಬಾರಿ ಹವ್ಯಾಸಗಳನ್ನು ಪೂರೈಸಲು ಪತಿ ಲಲಿತ್ ಕಳ್ಳತನದ ಹಾದಿ ಹಿಡಿದಿದ್ದನು. ಆರೋಪಿಗಳು ನಾಗ್ಪುರ, ಅಕೋಲಾ, ಅಮರಾವತಿ, ಗಡ್ಚಿರೋಲಿ, ಚಂದ್ರಾಪುರ, ಯವತ್ಮಾಲ್, ಭಂಡಾರಾ ಮತ್ತಿತರ ಜಿಲ್ಲೆಗಳಲ್ಲಿ ಕಳ್ಳತನ ಮಾಡಿ ವಿವಿಧ ಜಿಲ್ಲೆಗಳಲ್ಲಿ ಮಾರಾಟ ಮಾಡುತಿದ್ದನು.
ಎರಡು ವರ್ಷಗಳಿಂದ ವಾಹನ ಕಳ್ಳತನದಲ್ಲಿ ಸಕ್ರಿಯನಾದ ಲಲಿತ್ ,ವಾಹನ ಕಳವು ಮಾಡಿದ ಬಳಿಕ ಕೆಲ ಬದಲಾವಣೆ ಮಾಡಿ ಗ್ರಾಮಾಂತರ ಪ್ರದೇಶದಿಂದ ಕಳುಹಿಸುತ್ತಿದ್ದ. ನಂತರ ದಾಖಲೆಗಳನ್ನು ಒದಗಿಸುವ ಭರವಸೆಯನ್ನು ನೋಡಿ ಸಿಕ್ಕ ಬೆಲೆಗೆ ಬೈಕ್ ಮಾರಾಟ ಮಾಡುತ್ತಿದ್ದನು.
111 ಬೈಕ್‌ಗಳನ್ನು ಕದ್ದು ಡ್ಯೂಪ್ಲಿಕೇಟ್ ಕೀಯಿಂದ ಬೀಗ ಮುರಿದು ವಾಹನ ಕಳ್ಳತನ ಮಾಡುತ್ತಿದ್ದ ಲಲಿತ್ ನನ್ನು ನಾಗ್ಪುರ ಕ್ರೈಂ ಬ್ರಾಂಚ್ ಬಂಧಿಸಿದೆ.
ಆರೋಪಿಯಾದ ಲಲಿತ್ ಗಜೇಂದ್ರ ಭೋಂಗೆ ಎಂಬಾತನಿಂದ ಪೊಲೀಸರು ಸುಮಾರು 77 ಲಕ್ಷ ಮೌಲ್ಯದ ಬೈಕ್ ವಶಪಡಿಸಿಕೊಂಡಿದ್ದಾರೆ.‘ಜೆಡಿಎಸ್ ‘ನಿಂದ ಸ್ಪರ್ಧಿಸಲು ಮಂಡ್ಯದಲ್ಲಿ ‘ಗಂಡಸರು’ ಇಲ್ವ? – ‘ಶಾಸಕ ಕದಲೂರು ಉದಯ್’ ಪ್ರಶ್ನೆ
ಪೊಲೀಸರು ಆರೋಪಿಗಳನ್ನು ತಲುಪಲು ಸುಮಾರು 250 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಶೋಧಿಸಬೇಕಾಗಿತ್ತು ಎಂದು ನಾಗ್ಪುರ ಪೊಲೀಸ್ ಕಮಿಷನರ್ ಡಾ.ರವೀಂದ್ರ ಕುಮಾರ್ ಸಿಂಗಲ್ ಅವರು ಮಾಹಿತಿ ನೀಡಿದ್ದಾರೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ