January 10, 2025

Newsnap Kannada

The World at your finger tips!

hulical n

ಶಿಕ್ಷಣದಲ್ಲಿ ವೈಜ್ಞಾನಿಕ ಮನೋ ಭಾವನೆಯನ್ನು ಬೆಳಸುವಂತೆ ಹುಲಿಕಲ್ ನಟರಾಜ್ ಕರೆ

Spread the love

ರಾಜ್ಯಾದ್ಯಂತ ವಿಜ್ಞಾನವನ್ನು ವೈಜ್ಞಾನಿಕವಾಗಿ ಬೆಳೆಸುವ ನಿಟ್ಟಿನಲ್ಲಿ ಕೆಲವು ಕಾರ್ಯಕ್ರಮದ ರೂಪರೇಷೆಗಳನ್ನು ಹಮ್ಮಿಕೊಳ್ಳಲಾಗುವುದು ಡಾ. ಹುಲಿಕಲ್ ನಟರಾಜ್ ಹೇಳಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಮಂಡ್ಯ ಜಿಲ್ಲಾ ಸಮಿತಿ ವತಿಯಿಂದ ನಗರದ ಕರ್ನಾಟಕ ಸಂಘ ಆವರಣದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಅಭಿನಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹುಲಿಕಲ್ ನಟರಾಜ್ ,
ಮೌಢ್ಯಾಚರಣೆ ಯನ್ನು ನಿಲ್ಲಿಸಬೇಕು. ಶಿಕ್ಷಣದಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಅನಕ್ಷರತೆಯನ್ನು ಹೋಗಲಾಡಿಸಬೇಕು ಎಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಉಪಾಧ್ಯಕ್ಷ ಡಾ. ಸಿದ್ದರಾಜು ಕಾರ್ಯಕ್ರಮದ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿದರು.

ಹಿರಿಯ ಸಾಹಿತಿಗಳಾದ ಕೆ ಮಾಯಿಗೌಡ ರವರು ಮಾತನಾಡಿ ಈ ರಾಜ್ಯದಲ್ಲಿ ಮೌಢ್ಯಾಚರಣೆ ಆಚರಣೆ ಮಾಡುವುದರ ಮುಖಾಂತರ ಆಚರಿಸುತ್ತಿದ್ದಾರೆ ಇದರಿಂದ ತೊಲಗಬೇಕು ವಿಜ್ಞಾನ ಬೆಳೆಯಬೇಕು ಅವೈಜ್ಞಾನಿಕತೆಯನ್ನು ಅಳಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಶಿಕ್ಷಕರಿಗೆ ಸನ್ಮಾನಿಸಲಾಯಿತು ದೊಡ್ಡ ಬೋರಯ್ಯರವರು ಪ್ರಾಂಶುಪಾಲರು ಸರ್ಕಾರಿ ಪದವಿಪೂರ್ವ ಕಾಲೇಜು ಅನ್ನೋರು ನಂಜರಾಜು ವಿಜ್ಞಾನ ವಿಷಯ ಪರಿವೀಕ್ಷಕರು ಉಪನಿರ್ದೇಶಕರ ಕಚೇರಿ ಮಂಡ್ಯ ಎಂ ಜಯಲಕ್ಷ್ಮಿ ರವರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹೆಬ್ಬಕವಾಡಿ ಮಹಮ್ಮದ್ ಅಶ್ರಫ್ ರವರು ಶಿಕ್ಷಕರು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಮಂಡ್ಯ ಎಂ ಜೆ ಅಶೋಕ್ ರವರು ಸರ್ಕಾರಿ ಪ್ರೌಢಶಾಲೆ ಹೊನ್ನಾಯ್ಕನಹಳ್ಳಿ ಮಂಡ್ಯ ಶ್ರೀಮತಿ ಉಮಾವತಿ ಶಿಕ್ಷಕರು ಹಿರಿಯ ಪ್ರಾಥಮಿಕ ಶಾಲೆ ತಾವರೆಕೆರೆ ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ಯನ್ನುಸಿ ಶಿವಲಿಂಗಯ್ಯ ಚಿಕ್ಕರಸಿನಕೆರೆ ಅಧ್ಯಕ್ಷರು ಇವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಅನ್ನದಾನಿ ನಾರಾಯಣಸ್ವಾಮಿ ಅನುಪಮಾ ಅಂಬರಹಳ್ಳಿಸ್ವಾಮಿ ಪದ್ಮ ಮೋಹನ್ ಗುರುಮೂರ್ತಿ ಕೆಂಪರಾಜು ಸುಂಡಹಳ್ಳಿ ನಾಗರಾಜು ಎಂ ವಿ ಕೃಷ್ಣ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Copyright © All rights reserved Newsnap | Newsever by AF themes.
error: Content is protected !!