ಕೆಆರ್ ಎಸ್ ನಲ್ಲಿ ನೀರಿನ ಮಟ್ಟ ಭಾರಿ ಕುಸಿತ : ಐದು ವರ್ಷಗಳಲ್ಲಿ ಈ ವರ್ಷವೇ ಇಳಿಕೆ

Team Newsnap
1 Min Read

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್ ಡ್ಯಾಂ (KRS Dam) ಕಳೆದ ಐದು ವರ್ಷದ ಅವಧಿಯಲ್ಲಿ ನೀರಿನ ಪ್ರಮಾಣ ಅತ್ಯಂತ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಕಾವೇರಿ (Kaveri) ಜಲಾನಯನ ಪ್ರದೇಶದಲ್ಲಿ ಈ ಬಾರಿ ಹಿಂಗಾರು ಮಳೆಯೂ ಬಿದ್ದಿಲ್ಲ. ಆರಂಭವಾಗಬೇಕಿದ್ದ ಮುಂಗಾರು ಮಳೆಯೂ ಕೂಡ ಕೈ ಕೊಟ್ಟಿರುವುದು ನೀರಿನ ಕುಸಿತಕ್ಕೆ ಕಾರಣವಾಗಿದೆ.

124.80 ಅಡಿ ಗರಿಷ್ಠ ಮಟ್ಟದ ಕೆಆರ್‌ಎಸ್ ಡ್ಯಾಂ‌ನಲ್ಲಿ ಇಂದು 82.32 ಅಡಿಗಳು ಅಷ್ಟೇ ನೀರು ಇದೆ.

ಟಿಎಂಸಿ ಲೆಕ್ಕಾಚಾರದಲ್ಲಿ ಕೆಆರ್‌ಎಸ್ ಡ್ಯಾಂನ ಗರಿಷ್ಠ ಸಾಂದ್ರತೆ 49.452 ಟಿಎಂಸಿ. ಸದ್ಯ 11.847 ಟಿಎಂಸಿ ನೀರು ಇದೆ. 11.847 ಟಿಎಂಸಿ ಪೈಕಿ ಬಳಕೆಗೆ ಇರುವ ನೀರು 4.847 ಟಿಎಂಸಿ ಅಷ್ಟೇ. ಉಳಿದ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಲಿದೆ , ಈ ನೀರನ್ನು ಉಪಯೋಗಿಸಲು ಸಾಧ್ಯವಿಲ್ಲ.

ಒಂದು ವೇಳೆ ಈ ತಿಂಗಳು ಮಳೆ ಬೀಳದೆ ಇದ್ದರೆ, ಜುಲೈ ಎರಡನೇ ವಾರದಿಂದ ಮೈಸೂರು, ಬೆಂಗಳೂರು, ಮಂಡ್ಯ, ರಾಮನಗರ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಕೆಆರ್‌ಎಸ್ ನಲ್ಲಿ ಕಳೆದ ವರ್ಷ ಈ ದಿನದ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 105.55 ಅಡಿಗಳು

ಇದನ್ನು ಓದಿ – ನಾಳೆ ಗೃಹಲಕ್ಷ್ಮಿ ಯೋಜನೆಗೆ ಸಿಎಂ ಚಾಲನೆ : ಲಕ್ಷ್ಮಿ ಹೆಬ್ಬಾಳ್ಕರ್

ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 27.482 ಟಿಎಂಸಿ
ಒಳ ಹರಿವು – 1,425 ಕ್ಯೂಸೆಕ್
ಹೊರ ಹರಿವು – 1,143 ಕ್ಯೂಸೆಕ್

Share This Article
Leave a comment