ಗೋಕುಲಂ ಬಡಾವಣೆಯ ಮನೆ ಮಾಲೀಕ ಸತ್ಯನಾರಾಯಣ್ ಮನೆಯ ಹೊರಗಡೆ ಇಟ್ಟಿದ್ದ ಚಪ್ಪಲಿ ಸ್ಟ್ಯಾಂಡ್ನಲ್ಲಿ ಬೃಹತ್ ಗಾತ್ರದ ನಾಗರಹಾವು ಪ್ರತ್ಯಕ್ಷವಾಗಿದೆ.ಇದನ್ನು ಓದಿ –ಭಾರೀ ಮಳೆಗೆ ಮನೆ ಮೇಲೆ ಬಿದ್ದ ಮರ-ಮಲಗಿದ್ದಲ್ಲೇ ಇಬ್ಬರು ಮಹಿಳೆಯರ ಸಾವು
ಈ ವೇಳೆ ಮನೆ ಮಾಲೀಕ ಹಾವನ್ನ ಗಮನಿಸದೆ ಚಪ್ಪಲಿ ಸ್ಟ್ಯಾಂಡ್ಗೆ ಕೈ ಹಾಕಲು ಮುಂದಾಗಿದ್ದಾರೆ. ತಕ್ಷಣ ಬುಸುಗುಟ್ಟಿವ ನಾಗರಾಜನ ಸದ್ದು ಕೇಳಿ ಮನೆ ಮಾಲೀಕ ಬೆಚ್ಚಿ ಬಿದ್ದಿದ್ದಾರೆ.
ಕೂಡಲೇ ಮನೆ ಮಾಲೀಕರು, ಸ್ನೇಕ್ ಶ್ಯಾಮ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿ ಸ್ನೇಕ್ ಶ್ಯಾಮ್ ಅವರು ಹಾವನ್ನು ರಕ್ಷಣೆ ಮಾಡಿದ್ದಾರೆ.
ಮಳೆ ಹಾಗೂ ತಣ್ಣನೆಯ ವಾತಾವರಣದಿಂದ ಹಾವುಗಳು ಬೆಚ್ಚಗಿನ ಪ್ರದೇಶ ಹುಡುಕಿಕೊಂಡು ಜನವಸತಿ ಪ್ರದೇಶಗಳತ್ತ ಆಗಮಿಸುತ್ತಿದೆ ಮನೆ ಹೊರ ಭಾಗದಲ್ಲಿಟ್ಟಿರುವ ಹೆಲ್ಮೆಟ್, ಶೂ ಸೇರಿದಂತೆ ಕಬೋರ್ಡ್ ಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಿವೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು