“ಅರಮನೆ ನಗರಿ’ಗೆ ರೈಲು ಕಮ್ ಬಸ್‌ನ ಆಕರ್ಷಣೆ-ಯೋಜನೆ ರೂಪರೇಷೆ ಹೇಗೆ?

Team Newsnap
1 Min Read

ಎಲ್ಲವೂ ಅಂದುಕೊಂಡಂತೆ ನಡೆದರೆ ಮೈಸೂರಿನ ಜನರು ಭವಿಷ್ಯದಲ್ಲಿ ರೈಲು ಕಮ್ ಬಸ್ ಮಾದರಿಯ ವ್ಯವಸ್ಥೆ ಕಾಣುವ ಯೋಗವೂ ಬರಲಿದೆ. ನಿಯೋ ಮೆಟ್ರೋ ಸೇವೆ ಇದಾಗಿದೆ. ಒಮ್ಮೆಲೆ 250 ಮಂದಿ ಪ್ರಯಾಣಿಸಬಹುದು.


25 ಮೀಟರ್ ಉದ್ದದ ಎರಡು ಎಲೆಕ್ಟ್ರಿಕ್ ಟ್ರಾಲಿ ಬಸ್‌ಗಳ ಮಾದರಿಯ ನಿಯೊ ಮೆಟ್ರೊ ರೈಲಿಗೆ ರಬ್ಬರ್ ಟೈರ್‌ಗಳಿವೆ. ಹಳಿಗಳ ಮೇಲೆ ಚಲಿಸಲಿದೆ. ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸುವ ಹೊಸ ಮಾದರಿಯ ನಗರ ಸಾರಿಗೆ ವ್ಯವಸ್ಥೆ ಅನುಷ್ಠಾನ ಕುರಿತು ಸಮೀಕ್ಷೆ ನಡೆಸುವ ಪ್ರಸ್ತಾವಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದನೆ ನೀಡಿದೆ.

ದಕ್ಷಿಣ ಭಾರತದಲ್ಲಿ ಈ ಯೋಜನೆ ಸಮೀಕ್ಷೆ ನಡೆಸಲು ಮುಂದಾದ ಪ್ರಥಮ ನಗರಿ ಎಂದ ಖ್ಯಾತಿಗೆ ಮೈಸೂರು ಪಾತ್ರವಾಗಿದೆ. ಕೇಂದ್ರ ಸರ್ಕಾರ ರೂಪಿಸಿರುವ ಮೆಟ್ರೊ ನಿಯೊ ಹಾಗೂ ಮೆಟ್ರೊ ಲೈಟ್ ಯೋಜನೆ ಇದಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ರಾಜೀವ್ ಹೇಳಿದರು.


ಪ್ರಸಕ್ತ ಸಾಲಿನಲ್ಲಿ ಬಜೆಟ್‌ನಲ್ಲಿ ಟೈಯರ್ 2 ನಗರಗಳಿಗೆಂದು ಯೋಜನೆಯಡಿ 18 ಸಾವಿರಕೋಟಿ ಮೀಸಲಿರಿಸಿದೆ. ಶೇ. 80 ರಷ್ಟು ಕೇಂದ್ರದಿಂದ ಶೇ. 10 ರಷ್ಟು ರಾಜ್ಯ ಸರ್ಕಾರದಿಂದ ಸಿಗಲಿದೆ. ಶೇ. 10 ರಷ್ಟು ಪ್ರಾಧಿಕಾರದಿಂದ ಭರಸಬೇಕಾಗುತ್ತದೆ. ಸಮೀಕ್ಷಾ ವರದಿ ಸಿದ್ಧವಾದ ನಂತರ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

Share This Article
Leave a comment