January 28, 2026

Newsnap Kannada

The World at your finger tips!

umesh yadi

ಬಿಎಂಟಿಸಿ ಸಾಮಾನ್ಯ ನೌಕರನಿಗೆ ನೂರಾರು ಕೋಟಿ ಆಸ್ತಿ ಬಂದದ್ದು ಹೇಗೆ ?

Spread the love

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪರ ಆಪ್ತ ಸಹಾಯಕ ಉಮೇಶ್ ನಿವಾಸದ ಮೇಲೆ ಐಟಿ ದಾಳಿ ವೇಳೆ ಆತನಿಗೆ ಸೇರಿದ ನೂರಾರು ಕೋಟಿ ಆಸ್ತಿ ಪತ್ತೆಯಾಗಿದೆ

ಬಿಎಂಟಿಸಿಯಲ್ಲಿ ಕಂಡಕ್ಟರ್ ಕಂ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಉಮೇಶ್, ಬಿಎಸ್​ ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಉಸ್ತುವಾರಿ ವಹಿಸಿಕೊಂಡಿದ್ದನು.

ದಾಳಿಯ ಹಿನ್ನೆಲೆ ?

ನೀರಾವರಿ ಇಲಾಖೆಯಲ್ಲಿ ಕೋಟಿಗಟ್ಟಲೇ ಟೆಂಡರ್​ ಕರೆಯಲಾಗುತ್ತದೆ. ಈ ಟೆಂಡರ್​​ಗಳಲ್ಲಿ ಗೋಲ್ಮಾಲ್ ಮಾಡಿರುವ ಆರೋಪ ಬಿಎಸ್​ ಯಡಿಯೂರಪ್ಪರ ಆಪ್ತ ಉಮೇಶ್ ಮೇಲಿದೆ ಎನ್ನಲಾಗಿದೆ.

ಅದರಂತೆ ಕಾವೇರಿ ನೀರಾವರಿ‌ ನಿಗಮದ ಟೆಂಡರ್, ಕೃಷ್ಣ ಭಾಗ್ಯ ಜಲ ನಿಗಮದ ಟೆಂಡರ್ ಸೇರಿದಂತೆ ಅನೇಕ ಟೆಂಡರ್​ಗಳಲ್ಲಿ ಗೋಲ್ಮಾಲ್ ಮಾಡಿದ್ದಾರೆ  ಅನ್ನೋ ಆರೋಪವೂ ಇದೆ.

ಬಿಡುಗಡೆಯಾದ ಹಣಕ್ಕೂ, ಮಾಡಿರುವ ಕಾಮಗಾರಿಯ ಹಣದಲ್ಲಿಯೂ ಭಾರೀ ವ್ಯತ್ಯಾಸ ಇದೆಯಂತೆ. ಅದರಲ್ಲೂ ಗುತ್ತಿಗೆದಾರನ ಆದಾಯದಲ್ಲಿ ಭಾರೀ ವ್ಯತ್ಯಾಸ ಆಗಿದೆ ಎಂದು ಹೇಳಲಾಗಿದೆ.

ಇದರಲ್ಲಿ ಪ್ರಮುಖವಾಗಿ ಉಮೇಶ್ ವ್ಯವಹಾರದಲ್ಲಿ ಭಾರೀ ವ್ಯತ್ಯಾಸ ಆಗಿದ್ಯಂತೆ. ಕಳೆದ ಎರಡೂವರೆ ವರ್ಷಗಳಲ್ಲಿ ಸಾವಿರಾರು ಕೋಟಿ ವ್ಯವಹಾರ ನಡೆದಿದೆ ಅನ್ನೋ ಆರೋಪ ಇದೆ.

ಉಮೇಶ್ ಮೊದಲು ಬಿಎಂಟಿಸಿ ನೌಕರರಾಗಿ ಕೆಲಸ ಮಾಡುತ್ತಿದ್ದರು. 2008ರಲ್ಲಿ ಬಿಎಸ್​ವೈ ಸಿಎಂ ಆದ ಮೇಲೆ ಆ ಕೆಲಸಕ್ಕೆ ಗುಡ್​​ಬೈ ಹೇಳಿದ್ದರು. ನಂತರ ಇಡೀ ಬಿಎಸ್​ವೈ ಕುಟುಂಬದ ಆಪ್ತರಾಗಿ ಕೆಲಸ ಮಾಡುತ್ತಿದ್ದರು. ಇನ್ನು ಇವರ ಸಹೋದರ ಮಾಲತೇಶ ಪಿಡಿಓ ಆಗಿದ್ದಾರೆ.

ಉಮೇಶ್ ಅಕ್ರಮ ಆಸ್ತಿ ಎಷ್ಟು..?

ಕಳೆದ ಎರಡು ವರ್ಷಗಳಲ್ಲಿ ಉಮೇಶ್ ಅವರ ಆದಾಯದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ . ಉಮೇಶ್ ಸದ್ಯ ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿಯಿರುವ ಪ್ಲಾಟ್​ನಲ್ಲಿ ವಾಸವಿದ್ದಾರೆ. ಸಹಕಾರ‌ ನಗರದಲ್ಲಿ ಕೋಟ್ಯಾಂತರ ಮೌಲ್ಯದ ಮನೆ ನಿರ್ಮಾಣ ಮಾಡಿದ್ದಾರೆ. ಬಾಗಲಗುಂಟೆಯಲ್ಲಿ ಸೈಟ್​ಗಳನ್ನು ಹೊಂದಿದ್ದಾರೆ.


ಜೊತೆಗೆ ನೆಲಮಂಗಲದಲ್ಲಿ ಜಮೀನು ಇದೆ. ಬಿಡಿಎನಲ್ಲಿ ಅನೇಕ ಸೈಟ್​ಗಳನ್ನು ಕೂಡ ಮಂಜೂರು ಮಾಡಿಸಿಕೊಂಡಿದ್ದಾರೆ. ಉಮೇಶ್ ಹೆಸರಲ್ಲಿ ಮತ್ತು ಅವರ ಕುಟುಂಬಸ್ಥರ ಹೆಸರಲ್ಲಿ ಆಸ್ತಿ ಹೊಂದಿದ್ದಾನೆ.

error: Content is protected !!