- ಆಕೆ ಜೀವ ಹೋಗಿದೆ. ನಾವು ಆಕೆಯನ್ನು ಮತ್ತೊಂದು ಜೀವದಲ್ಲಿ ನೋಡುವ ಹಂಬಲ
- ಮಗುವಿನ ತಂದೆ ಆಸಿಷ್
20 ತಿಂಗಳ ಮಗುವಿಂದ ಐವರಿಗೆ ಜೀವದಾನ ಮಾಡಿದೆ. ಅದು ಹೇಗೆ ಸಾಧ್ಯ ಎನ್ನುತ್ತೀರಾ ? ಈ ಸ್ಟೋರಿ ಓದಿ…
ಮಹಡಿಯಿಂದ ಜಾರಿ ಬಿದ್ದ 20 ತಿಂಗಳ ಹೆಣ್ಣು ಮಗುವಿನ ಮೆದುಳು ನಿಷ್ಕ್ರಿಯ ವಾಯಿತು. ಸಾವು ಬದುಕಿನ ನಡುವೆ ಹೋರಾಟ ನಡೆಸಿತು. ಆಗ ಹೆತ್ತವರು ಮಗುವಿನ ಅಂಗಾಂಗಗಳನ್ನು ಅಗತ್ಯ ಇರುವ ವ್ಯಕ್ತಿಗಳಿಗೆ ದಾನ ಮಾಡಲು ಮುಂದಾದರು. ಕೊನೆಗೆ ಅಂಗಾಂಗಗಳು ಅಗತ್ಯವಿದ್ದ ಐವರಿಗೆ ಈ ಮಗುವಿಂದ ಪಡೆದುಕೊಂಡ ವೈದ್ಯರು ಐದು ಜೀವಗಳನ್ನು ಉಳಿಸಿದರು.
ದೆಹಲಿಯ 20 ತಿಂಗಳ ಧನಿಷ್ಟ್ ಎಂಬ ಮಗು ಆಟ ಆಡುವ ಮುನ್ನ ಮಹಡಿಯಿಂದ ಕೆಳಕ್ಕೆ ಬಿದ್ದು ಕೋಮಾ ಹಂತಕ್ಕೆ ತಲುಪಿತು. ಕೂಡಲೇ ಮಗುವನ್ನು ಗಂಗಾರಾಮ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆ ವೇಳೆ ಮಗುವಿನ ಮೆದುಳು ಸಂಪೂರ್ಣ ವಾಗಿ ನಿಷ್ಕ್ರಿಯಗೊಂಡಿತ್ತು.
ಕೊನೆಗೆ ಮಗುವಿನ ಪೋಷಕರು ಹೃದಯ, ಎರಡು ಕಿಡ್ನಿ, ಶ್ವಾಸಕೋಶ, ಕಣ್ಣಿನ ಕಾರ್ನಿಯಾ ಗಳನ್ನು ಅಗತ್ಯ ಇರುವ ರೋಗಿಗಳಿಗೆ ದಾನ ಮಾಡಲು ನಿರ್ಧರಿಸಿದರು.
ಮಗುವನ್ನು ನಾವು ಕಳೆದುಕೊಂಡೆವು. ಆ ಜೀವವನ್ನು ಮತ್ತೊಂದು ಜೀವದಲ್ಲಿ ನೋಡುವ ಅವಕಾಶವಾದರೂ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಮಗುವಿನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದೆವು ಎನ್ನುತ್ತಾರೆ ತಂದೆ ಆಶಿಷ್ ಕುಮಾರ್ .
- ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
- KSDL ನೌಕರ ಕೈಯಲ್ಲಿ ಡೆತ್ ನೋಟ್ ಹಿಡಿದು ಆತ್ಮಹತ್ಯೆ: ಕೆಲಸದ ಒತ್ತಡವೇ ಕಾರಣ?
- ಕೆಎಎಸ್ , ಸರ್ಕಾರಿ ಉದ್ಯೋಗ ಪಾಸ್ ಮಾಡಿಸೋ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ
- ಜ. 2 ರಂದು ರಾಜ್ಯ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಿರ್ಣಯ
- ಹೊಸ ವರ್ಷದ ಸಂಭ್ರಮ: ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ ಸಡಿಲಿಕೆ
More Stories
ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
ಜ. 2 ರಂದು ರಾಜ್ಯ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಿರ್ಣಯ
ವಿಮಾನ ಪತನ: ಕೊನೆಯ ಕ್ಷಣದಲ್ಲಿ ಲ್ಯಾಂಡಿಂಗ್ ಗೇರ್ ವೈಫಲ್ಯ; 179 ಮಂದಿ ದುರ್ಮರಣ!