ಹೋಟೆಲ್ ತಿಂಡಿ, ಊಟದ ಬೆಲೆ ಹೆಚ್ಚಳ ಪ್ರಸ್ತಾವನೆಗೆ ಸಂಘ ತಡೆ

Team Newsnap
1 Min Read

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಹೋಟೆಲ್ ತಿಂಡಿ , ಊಟ ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಹೋಟೆಲ್ ಮಾಲೀಕರ ಸಂಘ ತಾತ್ಕಾಲಿಕ ಬ್ರೇಕ್ ನೀಡಿದೆ

ಹೋಟೆಲ್ ತಿಂಡಿ ತಿನಿಸುಗಳ ಬೆಲೆ ಏರಿಕೆ ಬಗ್ಗೆ ಹೋಟೆಲ್ ಮಾಲೀಕರಲ್ಲೇ ಒಮ್ಮತ ಮೂಡದ ಕಾರಣ ಸಂಘ ಈ ನಿಧಾ೯ರ ಮಾಡಿದೆ.

ಗ್ಯಾಸ್ , ತರಕಾರಿ ಬೇಳೆ ಕಾಳುಗಳ ದರ ಹೆಚ್ಚಳವಾಗುತ್ತಿದೆ ನಿಜ. ಆದರೆ ಕೊರೋನಾ ಮುಕ್ತವಾದ ನಂತರ ವ್ಯಾಪಾರ ಈಗಷ್ಟೇ ಆರಂಭವಾಗಿದೆ. ಈ ಸಮಯದಲ್ಲೇ ತಿಂಡಿ ಊಟದ ಬೆಲೆ ಹೆಚ್ಚಳ ಮಾಡಿದರೆ ಮತ್ತೆ ಗ್ರಾಹಕರ ಸಂಖ್ಯೆ ಕಡಿಮೆ ಆಗಬಹುದು. ಹೀಗಾಗಿ ದಶ೯ನಿ ಸಣ್ಣ ಪುಟ್ಟ ಹೋಟೆಲ್ ಗಳು ದರ ಹೆಚ್ಚಳಕ್ಕೆ ವಿರೋಧ ವ್ಯಕ್ತ ಪಡಿಸಿವೆ.

ಈ ಕುರಿತಂತೆ ಹೋಟೆಲ್ ಮಾಲೀಕರ ಸಂಘ ಅಧ್ಯಕ್ಷರು ಪ್ರತಿಕ್ರಿಯೆ ನೀಡಿ ಇಂಧನ ಬೆಲೆ ಕಡಮೆ ಅದಂತೆ ಗ್ಯಾಸ್. ಬೆಲೆ ಕೂಡ ಇಳಿಯುವ ನಿರೀಕ್ಷೆ ಹೊಂದಲಾಗಿದೆ. ಏನೇಆದರೂ ಹೋಟೆಲ್ ತಿಂಡಿ ದರ ಹೆಚ್ಚಳದ ಬಗ್ಗೆ ಆಯಾ ಮಾಲೀಕರೆ ನಿಧಾ೯ರ ಮಾಡಬಹುದು ಎಂದರು

Share This Article
Leave a comment