January 10, 2025

Newsnap Kannada

The World at your finger tips!

WhatsApp Image 2022 04 19 at 6.14.31 PM

ಇನ್ನು ಮುಂದೆ ಬೆಂಗಳೂರಿನ ಹೋಟೆಲ್, ಬೇಕರಿ​ಗಳು ದಿನದ 24 ಗಂಟೆ ತೆರೆಯಲು ಅನುಮತಿ

Spread the love

ಬೆಂಗಳೂರಿನಲ್ಲಿ ದಿನದ 24 ಗಂಟೆಯೂ ಹೋಟೆಲ್​ಗಳು ತೆರೆದಿರಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಮಾತ್ರ ರಾತ್ರಿ ಹೊತ್ತು ಕೂಡ ಊಟ-ತಿಂಡಿ ಸಿಗಲಿದೆ.

ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ ಎಲ್ಲಾ ಹೋಟೆಲ್, ಬೇಕರಿ, ಸ್ವೀಟ್ಸ್ ಸ್ಟಾಲ್, ಐಸ್‌‌ಕ್ರಿಂ ಶಾಪ್ ರಾತ್ರಿ ಹೊತ್ತು ಕೂಡ ತೆರೆದಿರಲು ಅವಕಾಶ ನೀಡಲಾಗಿದೆ.

ಇದೇ ಮೊದಲ ಬಾರಿಗೆ 24/7 ಹೋಟೆಲ್ ತೆರೆಯಲು ಸರ್ಕಾರದಿಂದ ಅವಕಾಶ ನೀಡಿದೆ.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ಅನುಕೂಲಕ್ಕಾಗಿ ವ್ಯವಸ್ಥೆ ಜಾರಿ ಮಾಡಿದೆ.

ಸರ್ಕಾರದ ಈ ಆದೇಶ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ಸ್ವಾಗತಿಸಿದೆ. ಸರ್ಕಾರದ ಈ ಆದೇಶದ ಬೆನ್ನಲ್ಲೇ ಪೊಲೀಸ್ ಇಲಾಖೆಯಿಂದ ಅನುಮತಿ ಕೋರಿ ಹೋಟೆಲ್‌ ಸಂಘ ಪತ್ರ ಬರೆದಿದೆ.

ಪೊಲೀಸ್ ಇಲಾಖೆಯಿಂದ ಅನುಮತಿ ಬಳಿಕ 24/7 ಸೇವೆ ಆರಂಭವಾಗಲಿದೆ. ಕೋವಿಡ್ ಕಾರಣದಿಂದ ಸೇವೆ ತಡೆ ಹಿಡಿಯಲಾಗಿತ್ತು.

Copyright © All rights reserved Newsnap | Newsever by AF themes.
error: Content is protected !!