ಗೆಜ್ಜಲಗೆರೆ ಬಳಿ ಭೀಕರ ಬೈಕ್ ಅಪಘಾತ : ಯುವತಿ ಸಾವು – ಯುವಕನ ಸ್ಥಿತಿ ಗಂಭೀರ

Team Newsnap
1 Min Read

ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೈವೇನಲ್ಲಿ ಭೀಕರವಾಗಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಯುವತಿಯೊಬ್ಬಳು ಧಾರುಣವಾಗಿ ಸಾವನ್ನಪ್ಪಿದ ಘಟನೆ ಮದ್ದೂರಿನ ಸಮೀಪದ ಗೆಜ್ಜಲಗೆರೆಯಲ್ಲಿ ಸಂಭವಿಸಿದೆ

ತಮಿಳುನಾಡಿನ ಪ್ರಿಯಾಂಕ ರಾಜು (32) ಮೃತ ಯುವತಿ. ಆಕೆಯನ್ನು ಕೂರಿಸಿಕೊಂಡು ಬೈಕ್ ಓಡಿಸುತ್ತಿದ್ದ ಸವಾರ ಲಕ್ಷ್ಮಿ ನಾರಾಯಣ ಗೌಡ ಗಂಭೀರವಾಗಿ ಗಾಯಗೊಂಡಿದ್ದಾನೆ .
ಈಕೆ ಹಾಸನದ ದಾಸನಕೊಪ್ಪಲು ನಿವಾಸಿಯಾಗಿದ್ದಾಳೆ.

ಈ ರಸ್ತೆಯಲ್ಲಿ ತಾಯಿ-ಮಗನ ಸಾವಾಗಿತ್ತು. ಇದೀಗ ಮತ್ತೊಂದು ಜೀವವನ್ನು ಎಕ್ಸ್ ಪ್ರೆಸ್ ಹೈವೇ ಬಲಿ ತೆಗೆದುಕೊಂಡಿದೆ.

ಇಬ್ಬರು ಬೆಂಗಳೂರಿನ ಐಟಿ ಕಂಪನಿಯ ಉದ್ಯೋಗಿಗಳು. ಇಬ್ಬರು ಬೈಕಿನಲ್ಲಿ ಮೈಸೂರಿಗೆ ಪ್ರವಾಸಕ್ಕೆಂದು ಬಂದಿದ್ದರು.
ವಾಪಸ್ ಬೆಂಗಳೂರಿಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.

ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ನಿಯಂತ್ರಣ ತಪ್ಪಿ ಅಪಘಾತವಾಗಿದೆ.
ಅಪಘಾತದ ರಭಸಕ್ಕೆ ಸವಾರನ ಕುತ್ತಿಗೆ ಸೀಳಿ, ಎಡಗೈ ಕಟ್ ಆಗಿದೆ.
ಮದ್ದೂರು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಇದನ್ನು ಓದಿ –ನಮ್ಮ ಮೆಟ್ರೋದಲ್ಲಿ ವಿವಿಧ 236 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Share This Article
Leave a comment