October 23, 2021

Newsnap Kannada

The World at your finger tips!

ಯಾದಗಿರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಪೈಶಾಚಿ ಕೃತ್ಯ : ಹನಿಟ್ರ್ಯಾಪ್ ಶಂಕೆ – ನಾಲ್ವರು ವಶಕ್ಕೆ

Spread the love

ಮಹಿಳೆಯನ್ನು ವಿವಸ್ತ್ರಗೊಳಿಸಿ ಪೈಶಾಚಿಕ ಹಲ್ಲೆ ಮಾಡಿ ಕಬ್ಬಿನ ಜಲ್ಲೆಯಿಂದ ಥಳಿಸಿ ವಿಕೃತವಾಗಿ ದೈಹಿಕ ಹಿಂಸೆ ಮಾಡಿರುವ ಅಮಾನವೀಯ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಜರುಗಿದೆ.

ಯಾದಗಿರಿ – ಶಹಾಪುರ ರಾಜ್ಯ ಹೆದ್ದಾರಿಯಲ್ಲಿ ನಡೆದಿದ ಈ ಘನೆಯಲ್ಲಿ 5-6 ಮಂದಿಯ ಕಿರಾತಕರ ಗುಂಪು ಮಹಿಳೆಯನ್ನು ನಗ್ನ ಮಾಡಿ ಅಂಗಾಂಗಗಳನ್ನು ಮುಟ್ಟಿ ಚಿತ್ರಹಿಂಸೆ ಕೊಟ್ಟು ವೀಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ಎನ್ನಲಾಗುತ್ತಿದೆ.

ವೀಡಿಯೋವನ್ನು ಗಮನಿಸುತ್ತಿದ್ದಂತೆ ಹನಿಟ್ರ್ಯಾಪ್ ಪ್ರಕರಣದಲ್ಲಿ ಮಹಿಳೆ ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದೆ. ಯುವಕನೋರ್ವ ನನ್ನಿಂದ 10-15 ಸಾವಿರ ಹಣ ಪಡೆದಿದ್ದಾಳೆ ಎಂದು ಸಿಟ್ಟಿನಿಂದ ಹೊಡೆಯುತ್ತಿದ್ದಾನೆ.

ವಾಹನ ಒಂದರ ಹೆಡ್ ಲೈಟ್ ಹಾಗೂ ಮೊಬೈಲ್ ಟಾರ್ಚ್ ಹಾಕಿ ಹಲ್ಲೆ ಮಾಡಿದ್ದಾರೆ. ಘಟನೆ ಹೊರ ಹಾಕಿದರೆ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

ನಾಲ್ವರು ಆರೋಪಿಗಳು ವಶಕ್ಕೆ :

ಈ ಘಟನೆ ಕುರಿತು ಯಾದಗಿರಿ ಜಿಲ್ಲಾ ಎಸ್ಪಿ ವೇದಮೂರ್ತಿ ಮಾಹಿತಿ ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೋಲಿಸ್ ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ನಾಲ್ವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.

error: Content is protected !!