June 7, 2023

Newsnap Kannada

The World at your finger tips!

man,gold,police

Honesty of a young man in Nagamangala, Mandya - On the way he handed over the gold jewelery to the police

ಮಂಡ್ಯದ ನಾಗಮಂಗಲದಲ್ಲಿ ಯುವಕನ ಪ್ರಾಮಾಣಿಕತೆ – ದಾರಿಯಲ್ಲಿ ಸಿಕ್ಕ ಚಿನ್ನದ ಸರವನ್ನು ಪೋಲಿಸರಿಗೆ ಒಪ್ಪಿಸಿದ

Spread the love

ಮಂಡ್ಯದ ನಾಗಮಂಗಲದಲ್ಲಿ ಯುವಕನೊಬ್ಬ ದಾರಿಯಲ್ಲಿ ಸಿಕ್ಕ 33 ಗ್ರಾಂ. ತೂಕದ ಚಿನ್ನದ ಸರವನ್ನು ಪೊಲೀಸ್ ಠಾಣೆಗೆ ನೀಡಿ ಅದನ್ನು ಅದರ ವಾರಸುದಾರರಿಗೆ ತಲುಪಿಸಿ ಎನ್ನುವ ಮೂಲಕ ಪ್ರಾಮಾಣಿಕತೆ ತೋರಿದ್ದಾನೆ

ಇದನ್ನು ಓದಿ –ಶ್ರೀರಂಗಪಟ್ಟಣ -ಖಿನ್ನತೆಗೆ ಒಳಗಾದವ ಕಾವೇರಿ ನದಿಯಲ್ಲಿ BMW ಕಾರನ್ನು ಮುಳುಗಿಸಿದ

ಚಂದ್ರಶೇಖರ್ ಎಂಬುವವರೇ ಮಾನವೀಯತೆ ಮೆರೆದ ವ್ಯಕ್ತಿ. ಮೈಸೂರಿನ ಟ್ರ್ಯಾಕ್ಟರ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ಆತ ನಿನ್ನೆ ಕುಟುಂಬಸ್ಥರ ಜೊತೆ ಮದುವೆಗೆಂದು ನಾಗಮಂಗಲಕ್ಕೆ ಬಂದಿದ್ದನು.

ಈ ವೇಳೆ ನಿದ್ದೆ ಮಾಡಲು ರೂಮ್‍ಗೆ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ಬೀದಿ ದೀಪಕ್ಕೆ ಹೊಳೆಯುತ್ತಿದ್ದ ವಸ್ತುವೊಂದು ಚಂದ್ರಶೇಖರ್ ಕಣ್ಣಿಗೆ ಬಿದ್ದಿದೆ.
ನಂತರ ಅದು ಏನು ಅಂತ ನೋಡಿದಾಗ ಅದು ಚಿನ್ನದ ಸರವಾಗಿದೆ.

ಬಳಿಕ ಚಂದ್ರಶೇಖರ್ ಅದನ್ನು ರೂಮ್‍ಗೆ ತೆಗೆದುಕೊಂಡು ಹೋಗಿದ್ದಾನೆ. ಈ ಸರ
ಕಳೆದುಕೊಂಡು ಎಷ್ಟು ಕಷ್ಟಪಡುತ್ತಿದ್ದಾರೊ ಅಂತ ಬೆಳಗ್ಗೆ ಎದ್ದು ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಗೆ ತೆರಳಿದ್ದಾನೆ.

ಬಳಿಕ ಸರ್ ಇದು ರಸ್ತೆಯಲ್ಲಿ ಸಿಕ್ಕಿದೆ. ಇದನ್ನು ಅದರ ವಾರಸುದಾರರಿಗೆ ತಲುಪಿಸಿ ಎಂದು ಪೊಲೀಸರಿಗೆ ನೀಡಿದ್ದಾನೆ. ಚಂದ್ರಶೇಖರ್‌ನ ಪ್ರಾಮಾಣಿಕತೆಗೆ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

error: Content is protected !!