ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾಮೈಸೂರಿಗೆ ಆಗಮಿಸಿದ್ದಾರೆ.
ಈ ವೇಳೆ ಕೃಷ್ಣರಾಜೇಂದ್ರ ಕ್ಷೇತ್ರದ ಟಿಕೆಟ್ ವಂಚಿತರಾಗಿರುವ ಎಸ್‌ಎ ರಾಮದಾಸ್ ಅವರನ್ನು ಅಮಿತ್ ಶಾ ಬಾಚಿ ತಬ್ಬಿ, ಬೆನ್ನು ತಟ್ಟಿದ್ದಾರೆ.
ಅಮಿತ್ ಶಾ ಆಗಮಿಸುತ್ತಲೇ ಅವರ ಕಾಲಿಗೆ ನಮಸ್ಕರಿಸಿ ರಾಮದಾಸ್ ಸ್ವಾಗತಿಸಿದರು. ಈ ವೇಳೆ ಅಮಿತ್ ಶಾ ಅವರನ್ನು ಬಾಚಿ ತಬ್ಬಿ, ಬೆನ್ನು ತಟ್ಟಿದ್ದಾರೆ.
ಈ ಕುರಿತಂತೆ ಮಾತನಾಡಿದ ರಾಮದಾಸ್, ನಾನು ಆರೋಗ್ಯದ ಸಮಸ್ಯೆಯ ಹಿನ್ನೆಲೆ ಆಸ್ಪತ್ರೆಯಲ್ಲಿದ್ದೆ. ರಾಷ್ಟ್ರೀಯ ನಾಯಕರು ಬಂದಾಗ ನಾನು ಸ್ವಾಗತ ಕೋರುವುದು ನನ್ನ ಜವಾಬ್ದಾರಿ. ಏರ್‌ಪೋರ್ಟ್‌ನಲ್ಲಿ ಇಳಿದಾಗ ಅಮಿತ್ ಶಾ ಅವರು ಬಹಳ ಆತ್ಮೀಯವಾಗಿ ಅಪ್ಪುಗೆ ನೀಡಿ ಮಾತನಾಡಿಸಿದರು.
ರಾಮದಾಸ್ ಜಿ ಬಹುತ್ ಅಚ್ಚಾ ನಿರ್ಣಯ್ ಲಿಯಾ ಅಂತಾ ತಬ್ಬಿ ನಗು ಸೂಸಿದರು. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಮದಾಸ್ ಸಂತಸ ವ್ಯಕ್ತಪಡಿಸಿದರು.
ನಾನು ಯಾವತ್ತೂ ಭರವಸೆ ಬೇಕು ಎಂದು ಕೇಳಿದವನಲ್ಲ. ಇದು ಇವತ್ತಿನ ಸಂಬಂಧ ಅಲ್ಲ. 25 ವರ್ಷ ಹಳೆಯ ಸಂಬಂಧ. ಅದನ್ನು ಮಾತಿನಲ್ಲಿ ಹೇಳುವ ಅವಶ್ಯಕತೆ ಇಲ್ಲ. ಅವರು ನನ್ನ ನಿರ್ಣಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನಗೆ ಅಷ್ಟೇ ಸಾಕು. ನಾನು ಕೂಡ ಇಷ್ಟು ಆತ್ಮೀಯತೆಯನ್ನು ನಿರೀಕ್ಷೆ ಮಾಡಿರಲಿಲ್ಲ.ನಟ, ನಿರ್ದೇಶಕ ಟಪೋರಿ ಸತ್ಯ ನಿಧನ
ಮೋದಿಯವರು ಬೆನ್ನು ತಟ್ಟಿದಾಗಲೂ ನಾನು ನಿರೀಕ್ಷೆ ಮಾಡಿರಲಿಲ್ಲ. ಮೋದಿಯವರು ಆತ್ಮೀಯವಾಗಿ ಮಾತನಾಡಿಸಿದಾಗಲೂ ಕೂಡ ನಮ್ಮ 25 ವರ್ಷದ ಸಂಬಂಧವನ್ನು ಎಲ್ಲೂ ಹೊರಗೆ ಬಾರದಂತೆ ನೋಡಿಕೊಂಡಿದ್ದೆ ಎಂದರು.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ