ನಟ, ನಿರ್ದೇಶಕ ಟಪೋರಿ ಸತ್ಯ ನಿಧನ

Team Newsnap
1 Min Read
Actor, director Tapori Sathya passed away ನಟ, ನಿರ್ದೇಶಕ ಟಪೋರಿ ಸತ್ಯ ನಿಧನ

ಸ್ಯಾಂಡಲ್‌ವುಡ್‌ ನಟ ಹಾಗೂ ನಿರ್ದೇಶಕ ಟಪೋರಿ ಸತ್ಯ (45) ನಿಧನರಾದರು.

ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಟಪೋರಿ ಸತ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಪತ್ನಿ, ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

ಬೆಂಗಳೂರಿನ ಬನಶಂಕರಿ ಮೂರನೇ ಹಂತದಲ್ಲಿ ಇರುವ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಇದನ್ನು ಓದಿ –ಬಿಬಿಎಂಪಿ ಅಧಿಕಾರಿ ಮನೆ ಮೇಲೆ ‘ಲೋಕಾ’ದಾಳಿ- ಪರಿಶೀಲನೆ 

ಟಪೋರಿ ಸತ್ಯ ನಂದ ಲವ್ಸ್ ನಂದಿತಾ ಸಿನಿಮಾ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ‘ಮೇಳ’ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

Share This Article
Leave a comment