February 23, 2026

Newsnap Kannada

The World at your finger tips!

kusitha

ಶ್ರೀರಂಗಪಟ್ಟಣಲ್ಲಿ ಮಳೆಗೆ ಮನೆ ಕುಸಿತ:ರಾತ್ರಿ ವೇಳೆ ಕುಟುಂಬಸ್ಥರು ಬಚಾವ್ ಆಗಿದ್ದೇ ಪವಾಡ

Spread the love

ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಮ್ ಮನೆಯೊಂದು
ಕುಸಿದಿದೆ. ಯಾವುದೇ ಪ್ರಾಣಾಪಾಯ ಆಗಿಲ್ಲ.

ಸೈಯದ್ ನಾಸೀರ್ ಎಂಬುವವರಿಗೆ ಸೇರಿದ ಮನೆ ಕುಸಿಯುವ ಮುನ್ನ ಜೋರಾದ ಶಬ್ದ ಆಗಿದೆ. ಶಬ್ದ ಕೇಳಿಸುತ್ತಿದ್ದಂತೆ ಸೈಯದ್ ನಾಸೀರ್, ಹೆಂಡತಿ, ಮೂವರು ಮಕ್ಕಳು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಇದಿರಿಂದಾಗಿ ಭಾರೀ ಅನಾಹುತ ಒಂದು ತಪ್ಪಿದೆ

ಮನೆಯಲ್ಲಿದ್ದ ದಿನಸಿ ಪದಾರ್ಥಗಳು, ಬೀರು, ಪಾತ್ರೆಗಳು ಸೇರಿದಂತೆ ವಸ್ತುಗಳು ನೆಲಸಮ ಆಗಿದೆ. ಮನೆ ಕಳೆದುಕೊಂಡ ಕುಟುಂಬ ಕಂಗಾಲಾಗಿದೆ.

ಇನ್ನು ಕೆ.ಆರ್.ಪೇಟೆ ತಾಲೂಕಿನಾದ್ಯಂತ ಕೂಡ ಭರ್ಜರಿ ಮಳೆ ಆಗಿದೆ. ಮಳೆಗೆ ಕೆ.ಆರ್.ಪೇಟೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಜಲಾವೃತವಾಗಿದೆ.
.

error: Content is protected !!