ಹೊಳೆ ಹೊನ್ನೂರು ಉಪ ತಹಶೀಲ್ದಾರ್ – ಮಧ್ಯವರ್ತಿ ‘ಲೋಕಾ’ ಬಲೆಗೆ

Team Newsnap
1 Min Read

ಶಿವಮೊಗ್ಗ : ಖಾತೆ ಬದಲಾವಣೆಗೆ 30 ಸಾವಿರ ರು ಲಂಚ ಸ್ವೀಕರಿಸುವ ಮುನ್ನ ಹೊಳೆ ಹೊನ್ನೂರು ಉಪ ತಹಶೀಲ್ದಾರ್ ಹಾಗೂ ಮಾಧ್ಯವರ್ತಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಹೊಳೆಹೊನ್ನೂರು ನಾಡಕಚೇರಿಯ ಉಪ ತಹಶೀಲ್ದಾರ್ ಪರಮೇಶ್ವರ್ (59) ಹಾಗೂ ಮಧ್ಯವರ್ತಿ ಪ್ರಕಾಶ್ ನಾಯ್ಕ್ (32) ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಖಾತೆ ಬದಲಾವಣೆಗಾಗಿ 40,000 ರೂಪಾಯಿ ಲಂಚದ ಬೇಡಿಕೆಯನ್ನು ಇಟ್ಟಿದ್ದು 30,000 ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.ತ. ನಾಡಿಗೆ ನೀರು – ಮಂಡ್ಯದ ಬಳಿ ರೈತರ ಪ್ರತಿಭಟನೆ – ಪೋಲಿಸರಿಂದ ಬಂಧನ

ಶಿವರಾಜ್ ಎಂಬುವವರು ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿ ವೈ ಎಸ್ ಪಿ ಉಮೇಶ್ ಈಶ್ವರ್ ನಾಯ್ಕ್ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿದೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ್ದಾರೆ

Share This Article
Leave a comment