December 23, 2024

Newsnap Kannada

The World at your finger tips!

WhatsApp Image 2022 06 07 at 12.05.14 PM

Hizjul militant detention in Bengaluru - conspiracy to murder Hindus - youth targeted

ಬೆಂಗಳೂರಿನಲ್ಲಿ ಹಿಬ್ಜುಲ್ ಉಗ್ರನ ಬಂಧನ – ಹಿಂದೂಗಳ ಹತ್ಯೆಗೆ ಸಂಚು- ಯುವಕರೇ ಟಾರ್ಗೆಟ್​

Spread the love

ಕಳೆದ 2 ವರ್ಷಗಳಿಂದ ಬೆಂಗಳೂರಲ್ಲಿ ಆಶ್ರಯ ಪಡೆದಿದ್ದ ಹಿಜ್ಬುಲ್​ ಮುಜಾಹಿದ್ದೀನ್​ ಸಂಘಟನೆಯ ಭಯೋತ್ಪಾದಕನನ್ನು ಬೆಂಗಳೂರು ನಗರ ಪೊಲೀಸರ ಸಹಾಯದಿಂದ ಜಮ್ಮು-ಕಾಶ್ಮೀರದ ರಾಷ್ಟ್ರೀಯ ರೈಲ್ಸ್​ ಮತ್ತು ಸಿಆರ್​ಪಿಎ​ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಜೂ.3ರಂದೇ ಬಂಧಿಸಿ, ಕರೆದುಕೊಂಡು ಹೋದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನು ಓದಿ -ಅಗ್ನಿ-4 ಕ್ಷಿಪಣಿ ಪರೀಕ್ಷೆ ಪ್ರಯೋಗ ಯಶಸ್ವಿ- 4000 ಕಿ.ಮೀ. ದೂರದಿಂದಲೇ ಶತ್ರುಪಡೆ ನಾಶ

ಹಿಜ್ಬುಲ್​ ಮುಜಾಹಿದ್ದೀನ್​ನ ಮಾಸ್ಟರ್​ಮೈಂಡ್​ ತಾಲಿಬ್​ ಹುಸೇನ್​ ಬಂಧಿತ ಉಗ್ರ. ಉಗ್ರನ ಬಂಧನ ವಿಚಾರವನ್ನು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್​ ಸಿಂಗ್​ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

ಜಮ್ಮುವಿನ ಕಿಸ್ತ್ವಾರ್​ ಜಿಲ್ಲೆ ನಾಗಸೇನಿ ತಹಸಿಲ್​ ಮೂಲದ ತಾಲಿಬ್​ ಹುಸೇನ್​, 2016ರಲ್ಲಿ ಹಿಜ್ಬುಲ್​ ಮುಜಾಹಿದ್ದೀನ್​ ಸೇರಿದ್ದ. ಬುಡಕಟ್ಟು ಜನಾಂಗದ ತಾಲಿಬ್​ಗೆ ಇಬ್ಬರು ಪತ್ನಿಯರು, ಐವರು ಮಕ್ಕಳಿದ್ದಾರೆ.

ಮೊದಲಿಗೆ ಯುವಕರನ್ನು ಟಾರ್ಗೆಟ್​ ಮಾಡಿ, ಅವರ ಮನಪರಿವರ್ತಿಸಿ ಉಗ್ರ ಸಂಟನೆಗೆ ಸೇರ್ಪಡೆ ಮಾಡುತ್ತಿದ್ದ. ನಂತರ ಇವರನ್ನೇ ಬಳಸಿಕೊಂಡು ಹಿಂದುಗಳ ಹತ್ಯೆಗೆ ಸ್ಕೆಚ್​ ರೂಪಿಸುತ್ತಿದ್ದ. ಬಾಂಬ್​ ಸ್ಫೋಟ ಪ್ರಕರಣಗಳಲ್ಲಿಯೂ ಈತ ಭಾಗಿಯಾಗಿದ್ದ. ಕೇಂದ್ರ ಪಡೆಗಳ ಹಿಟ್​ಲೀಸ್ಟ್​ ಸೇರುತ್ತಿದ್ದಂತೆ ತಾಲಿಬ್​ ಹುಸೇನ್​ ಪರಾರಿಯಾಗಿದ್ದ. 2 ವರ್ಷಗಳ ಹಿಂದೆ ಓರ್ವ ಪತ್ನಿಯೊಂದಿಗೆ ಬೆಂಗಳೂರಿಗೆ ಬಂದು ಶ್ರೀರಾಂಪುರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ.

terrorists,hindus,youths
Hizjul militant detention in Bengaluru – conspiracy to murder Hindus – youth targeted

ಉಗ್ರನ ಬಂಧನಕ್ಕಾಗಿ ಕೇಂದ್ರೀಯ ಪಡೆಗಳು ನಿರಂತರವಾಗಿ ಹುಡುಕಾಟ ನಡೆಸಿದ್ದರೂ ಸುಳಿವು ಮಾತ್ರ ಲಭ್ಯವಾಗಿರಲಿಲ್ಲ.
ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಸಂದರ್ಭದಲ್ಲಿ ತಾಲಿಬ್​ ಹುಸೇನ್​ ಬೆಂಗಳೂರಿನಲ್ಲಿ ಅಡಗಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಒಂದು ವಾರದ ಹಿಂದೆ ಬೆಂಗಳೂರಿಗೆ ಬಂದ ರಾಷ್ಟ್ರೀಯ ರೈಲ್ಸ್​ ಪಡೆ ಮತ್ತು ಸಿಆರ್​ಪಿಎ​ ವಿಶೇಷ ತಂಡ ನಗರ ಪೊಲೀಸ್​ ಆಯುಕ್ತರನ್ನು ಭೇಟಿ ಮಾಡಿ ಮಾಹಿತಿ ವಿನಿಮಯ ಮಾಡಿಕೊಂಡಿತ್ತು.

ಉಗ್ರನ ಮನೆ ಪತ್ತೆ ಹಾಗೂ ಬಂಧನ ಕಾರ್ಯಾಚರಣೆಗೆ ಸಹಕರಿಸುವಂತೆ ಮನವಿ ಮಾಡಿದ್ದರು. ಸ್ಥಳಿಯ ಪೊಲೀಸರು ಉಗ್ರನ ಮನೆಯನ್ನು ಪತ್ತೆಹಚ್ಚಿ ಮಾಹಿತಿ ನೀಡಿದ್ದರು. ಆರೋಪಿಯನ್ನು ಬಂಧಿಸಿ ಜಮ್ಮು-ಕಾಶ್ಮೀರಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಶ್ರೀರಾಂಪುರದ ಬಾಡಿಗೆ ಮನೆಯಲ್ಲಿ ತಾಲೀಬ್​ ಹಾಗೂ ಆತನ ಪತ್ನಿ ವಾಸವಿದ್ದರೂ ಅಕ್ಕಪಕ್ಕದ ಮನೆಯವರಿಗಾಗಲಿ ಅಥವಾ ಮನೆ ಮಾಲೀಕರಿಗಾಗಲಿ ಅನುಮಾನ ಬಂದಿರಲಿಲ್ಲ. ಆಟೋ ಓಡಿಸಿಕೊಂಡು, ಮಾಮೂಲಿಯಾಗಿ ದಂಪತಿ ವಾಸವಿದ್ದರು. ಪೊಲೀಸರು ಬಂಧಿಸಿದಾಗಲೇ ಆತ ಉಗ್ರ ಎಂಬ ವಿಚಾರ ಗೊತ್ತಾಗಿದೆ.

ಸಿಎಂ ಬೊಮ್ಮಾಯಿ ಹೇಳಿಕೆ:

ಉಗ್ರನ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರಿನಲ್ಲಿ ನೆಲೆಯೂರಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿರುವುದು ನಿಜ. ಮುಂದಿನ ಹಂತದ ತನಿಖೆಗೆ ಬೇಕಾದ ಎಲ್ಲ ಸಹಕಾರವನ್ನು ಜಮ್ಮು-ಕಾಶ್ಮೀರ ಪೊಲೀಸರಿಗೆ ನಮ್ಮ ಪೊಲೀಸರು ನೀಡುವರು ಎಂದು ಹೇಳಿದರು.

bommai 1

ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಸಂಶಯಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾವಹಿಸುವುದು ಸಹಜ. ಈ ಹಿಂದೆ ಭಟ್ಕಳ, ಶಿರಸಿಯಲ್ಲಿ ಇಂತಹವರನ್ನು ಬಂಧಿಸಿ ಕರೆದೊಯ್ದ ನಿದರ್ಶನಗಳಿವೆ ಎಂದರು.

Copyright © All rights reserved Newsnap | Newsever by AF themes.
error: Content is protected !!