January 11, 2025

Newsnap Kannada

The World at your finger tips!

dasara s1

ಐತಿಹಾಸಿಕ ಶ್ರೀರಂಗಪಟ್ಟಣ ಜಂಬೂ ಸವಾರಿಗೆ ಸುತ್ತೂರುಶ್ರೀಗಳು, ಸಚಿವರಿಂದ ಚಾಲನೆ

Spread the love

ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ಸಚಿವ ನಾರಾಯಣಗೌಡ ಹಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯರವರು ಬುಧವಾರ ಚಾಲನೆ ನೀಡಿದರು.

dasadr s

ಶ್ರೀರಂಗಪಟ್ಟಣದ ಕಿರಂಗೂರು ಸರ್ಕಲ್‌ನ ಬನ್ನಿಮಂಟಪದ ಬಳಿ ಗಜರಾಜ ಮಹೇಂದ್ರ ಮೇಲೆ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.

ಅಂಬಾರಿ ಹೊತ್ತ ಮಹೇಂದ್ರನ ಜೊತೆ ಕಾವೇರಿ ಮತ್ತು ವಿಜಯ ಆನೆಗಳು ಹೆಜ್ಜೆ ಹಾಕಿದವು. ವೀರಗಾಸೆ, ಡೊಳ್ಳುಕುಣಿತ, ಟಮಟೆ, ಸೋಮನ ಕುಣಿತ, ನವಿಲು ಕುಣಿತ ಸೇರಿದಂತೆ ಹತ್ತಾರು ಕಲಾ ತಂಡಗಳ ಪ್ರದರ್ಶನ ಮನಸೂರೆಗೊಳಿಸಿತು. ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಪರಿಷ್ಕರಣೆಗೆ ಸಮಿತಿ ರಚನೆಗೆ ನಿರ್ಧಾರ : ಡಿಸೆಂಬರ್ ಅಂತ್ಯಕ್ಕೆ ವರದಿ

ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತಾ ಹುಲ್ಮನಿ,ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್,ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರೆನ್,
ಸೇರಿದಂತೆ ಭಾನುಪ್ರಕಾಶ್ , ಇತರರು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!