ನಾಗಮಂಗಲದಲ್ಲಿ ಹಿಂದೂ ಅಪ್ರಾಪ್ತ ಬಾಲಕಿ ಲೌವ್ ಜಿಹಾದ್ ಬಲೆಗೆ – ಮುಸ್ಲಿಂಗೆ ಮತಾಂತರವಾದರೆ ಮದುವೆ

Team Newsnap
1 Min Read

ಮುಸ್ಲಿಂ ವಿವಾಹಿತನೋರ್ವ ಹಿಂದೂ ಧರ್ಮದ ಬಾಲಕಿಯ ಅಶ್ಲೀಲ ವೀಡಿಯೋ ಚಿತ್ರಿಸಿ, ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ವೆಸಗಿದ್ದಾನೆ. ಅಲ್ಲದೇ ಲೌವ್ ಜಿಹಾದ್ ಮೂಲಕ ಮುಸ್ಲಿಂ ಧರ್ಮಕ್ಕೆ ಮತಾಂತರವಾದರೆ ಮಾತ್ರ ಮದುವೆಯಾಗುವ ಬೆದರಿಕೆ ಹಾಕಿರುವ ಪ್ರಕರಣ ಮಂಡ್ಯದ ನಾಗಮಂಗಲದಲ್ಲಿ ಬೆಳಕಿಗೆ ಬಂದಿದೆ.

ಕಳೆದ ತಿಂಗಳ ಹಿಂದೆಯಷ್ಟೇ ಮಳವಳ್ಳಿಯಲ್ಲಿ ಟ್ಯೂಷನ್ ಮಾಸ್ಟರ್ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿದ್ದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮುಸ್ಲಿಂ ವಿವಾಹಿತನೊಬ್ಬ ಹಿಂದೂ ಧರ್ಮದ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ತನ್ನ ಧರ್ಮಕ್ಕೆ ಮತಾಂತರವಾದರೆ ಮದುವೆಯಾಗುವುದಾಗಿ ಆಸೆ ತೋರಿಸಿದ್ದಾನೆ.

ನಾಗಮಂಗಲದಲ್ಲಿ ಈ ಘಟನೆ ನಡೆದಿದೆ, ಈ ಘಟನೆಯಲ್ಲಿ ಯೂನಸ್ ಫಾಷ (25) ಎಂದು ಗುರುತಿಸಲಾಗಿದೆ. ಎದುರು ಮನೆಯಲ್ಲೇ ವಾಸವಿದ್ದ ಬಾಲಕಿಯ ಸ್ನೇಹ ಸಂಪಾದಿಸಿದ್ದ ಯೂನಸ್ ಪಾಷ, ಹೆತ್ತವರಿಗೆ ತಿಳಿಯದಂತೆ ಮೊಬೈಲ್ ಕೊಡಿಸಿದ್ದ. ಬಳಿಕ ವೀಡಿಯೋ ಕಾಲ್‍ನಲ್ಲಿ ಬಾಲಕಿಯನ್ನು ಪುಸಲಾಯಿಸಿ ಬೆತ್ತಲೆ ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಆ ವೀಡಿಯೋವನ್ನು ಸೋಷಿಯಲ್ ಮೀಡಿಯಾಗೆ ಅಪ್‍ಲೋಡ್ ಮಾಡುವ ಬೆದರಿಕೆಯೊಡ್ಡಿದ್ದಾನೆ.

ಈ ಬಾಲಕಿಯ ತಂದೆ ನವೆಂಬರ್ 8 ರಂದು ಶಿರಡಿಗೆ ಹೋಗಿದ್ದರು. ಈ ವೇಳೆ ತಾಯಿಯೊಂದಿಗೆ ಅಜ್ಜಿ ಮನೆಗೆ ಹೋಗಿದ್ದ ಬಾಲಕಿಗೆ ನಿದ್ರೆ ಮಾತ್ರೆಯನ್ನು ಪುಡಿ ಮಾಡಿ ನೀಡಿದ್ದ ಕಾಮುಕ ಯೂನಸ್, ನವೆಂಬರ್ 11ರ ರಾತ್ರಿ ಸಾಂಬಾರಿಗೆ ಹಾಕಿಸಿದ್ದ. ಬಳಿಕ ಮನೆಯೊಳಗೆ ಬಂದು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆದಾದ ಬಳಿಕ ಬಾಲಕಿಯ ನಡುವಳಿಕೆಯಲ್ಲಾದ ಬದಲಾವಣೆ ಗಮನಿಸಿದ ಪೋಷಕರು ವಿಚಾರಿಸಿದಾಗ ಅತ್ಯಾಚಾರ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಈ ಬಗ್ಗೆ ನ. 19ರಂದು ಬಾಲಕಿಯ ತಂದೆ ದೂರು ನೀಡಿದ್ದು, ಸದ್ಯ ಪೊಲೀಸರು ಯೂನಸ್ ಪಾಷನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Share This Article
Leave a comment