ರಾಜ್ಯದ ನಾನಾ ಕಾಲೇಜುಗಳಲ್ಲಿ ಹಿಜಾಬ್ – ಕೇಸರಿ ಶಾಲು ಗಲಾಟೆ ; ಕಲ್ಲು ತೂರಾಟ – ಲಾಠಿ ಪ್ರಹಾರ

Team Newsnap
2 Min Read

ರಾಜ್ಯದಲ್ಲಿ ಹಿಜಾಬ್ ಹಾಗೂ ಕೇಸರಿಶಾಲು ವಿವಾದವು ಈಗ ಪ್ರತಿಭಟನೆ ಹಾದಿ ತುಳಿದಿದೆ.

ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಗದಗ, ಕಲಬುರಗಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಕಲ್ಲು ತೂರಾಟ, ಲಾಠಿ ಪ್ರಹಾರದಂತಹ ಘಟನೆಗಳು ವರದಿಯಾಗಿವೆ.

ಈ ನಡುವೆ ಭಾರಿ ಉದ್ವಿಗ್ನ ಸ್ಥಿತಿಯ ನಗರ, ಪಟ್ಟಣ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವಂತೆ ಶಿಕ್ಷಣ ಸಚಿವ ನಾಗೇಶ್ ಆದೇಶಿಸಿದ್ದಾರೆ.

ಉಡುಪಿಯ ಎಂಜೆಎಂ ಕಾಲೇಜಿನಲ್ಲಿ ಹೈಡ್ರಾಮಾ :

ಉಡುಪಿಯ ಮಣಿಪಾಲ್ ಬಳಿಯಿರುವ ಎಂಜಿಎಂ ಕಾಲೇಜಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಆರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿರುವ ಕಾರಣಕ್ಕೆ ಅವರನ್ನ ಕಾಲೇಜು ಆಡಳಿತ ಮಂಡಳಿ ತಡೆಯಿತು.

ಈ ವೇಳೆ ಹಿಜಾಬ್ ಪರ ಹೊಂದಿರುವ ವಿದ್ಯಾರ್ಥಿನಿಯರ ಗುಂಪು ಪ್ರತಿಭಟನೆಗೆ ಮುಂದಾಯ್ತು. ಅದನ್ನು ವಿರೋಧಿಸಿ, ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದು ಪ್ರತಿಭಟಿಸಿದರು.

ನಂತರ ಪ್ರತಿಭಟನಾ ಸ್ಥಳಕ್ಕೆ ಪೊಲೀಸರು ಎಂಟ್ರಿ ನೀಡಿ ಪರಿಸ್ಥಿತಿಯನ್ನ ಹತೋಟಿಗೆ ತಂದರು. ಸದ್ಯ ಅಲ್ಲಿನ ಪರಿಸ್ಥಿತಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಸದ್ಯ ಶಾಲಾ ಆಡಳಿತ ಮಂಡಳಿ ರಜೆಯನ್ನು ಘೋಷಣೆ ಮಾಡಿದೆ.

ಶಿವಮೊಗ್ಗ ಉದ್ವಿಗ್ನ – ನಿಚೇದಾಜ್ಞೆ ಜಾರಿ

ಧ್ವಜ ಕಂಬಕ್ಕೆ ಕೇಸರಿ ಬಾವುಟ ಕಟ್ಟಿದ ವಿದ್ಯಾರ್ಥಿಗಳು
ಶಿವಮಗೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿಚಾರಕ್ಕೆ ಕಲ್ಲು ತೂರಾಟ ನಡೆದಿದೆ.

ಹಿಜಾಬ್ ವಿರೋಧಿಸಿ ಕೆಲವು ವಿದ್ಯಾರ್ಥಿಗಳು, ಪ್ರತಿಭಟನೆ ನಡೆಸಿದರು. ಮಾತ್ರವಲ್ಲ ಕೆಲವು ವಿದ್ಯಾರ್ಥಿಗಳ ಗುಂಪು, ಶಾಲೆಯ ಧ್ವಜದ ಕಂಬ ಹತ್ತಿ ಕೇಸರಿ ಬಾವುಟ ಹಾರಿಸುವ ಪ್ರಯತ್ನ ಮಾಡಿದರು.

ಇನ್ನೊಂದು ಕಡೆ ಕಲ್ಲು ತೂರಾಟ ಕೂಡ ನಡೆಯಿತು. ಆಗ ಸ್ಥಳಕ್ಕೆ ಎಸ್ಪಿ ಲಕ್ಷ್ಮೀ ಪ್ರಸಾದ್ ಆಗಮಿಸಿ, ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತಂದರು. ಇನ್ನು ವಿದ್ಯಾರ್ಥಿಗಳನ್ನ ಚದುರಿಸಲು ಲಘು ಲಾಠಿ ಪ್ರಹಾರ ಕೂಡ ಮಾಡಲಾಯಿತು.

ದಾವಣಗೆರೆಯಲ್ಲೂ ಗಲಾಟೆ :

ದಾವಣಗೆರೆಯ ಬಿ.ಎಸ್.ಚನ್ನಬಸಪ್ಪ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಕೆಲವು ವಿದ್ಯಾರ್ಥಿನಿಯರು ಹಾಗೂ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದಿದ್ದರು. ಈ ವೇಳೆ ಉಪನ್ಯಾಸಕರು ಕೇಸರಿ ಶಾಲು ತೆಗೆದಿಟ್ಟು ಬರವಂತೆ ಮನವಿ ಮಾಡಿಕೊಂಡರು.

ಆಗ ವಿದ್ಯಾರ್ಥಿಗಳು ಹಿಜಾಬ್ ತೆಗೆದರೆ ಮಾತ್ರ ನಾವು ಕೇಸರಿ ಶಾಲು ತೆಗೆಯುತ್ತೇವೆ ಎಂದು ವಾಗ್ವಾದಕ್ಕೆ ಇಳಿದ ಪ್ರಸಂಗ ನಡೆಯಿತು.

ಕಾಲೇಜಿನಿಂದ ಹೊರ ಹಾಕಿದ್ದಕ್ಕೆ ಆಕ್ರೋಶ :

ಗದಗ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಹಿಜಾಬ್ ಧರಿಸಿದ್ದ ಕೆಲವು ವಿದ್ಯಾರ್ಥಿನಿಯರು, ಪ್ರಿನ್ಸಿಪಲ್ ಪ್ರಕಾಶ್ ಹೊಸಮನಿ ಅವ್ರಿಗೆ ಮುತ್ತಿಗೆ ಹಾಕಿದರು.

ಯಾವ ಆದೇಶ ಹಿನ್ನೆಲೆಯಲ್ಲಿ ನಮ್ಮನ್ನು ಕಾಲೇಜ್​ನಿಂದ ಹೊರಹಾಕಿದ್ದೀರಿ. ಸರ್ಕಾರದ ಆದೇಶ ಇದ್ದರೆ ತೋರಿಸಿ ಎಂದು ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಬಗುವಿನ ವಾತಾವರಣ ನಿರ್ಮಾಣ ಉಂಟಾದ ಹಿನ್ನೆಲೆಯಲ್ಲಿ ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕಲಬುರಗಿಯಲ್ಲೂ ಹಿಜಾಬ್ ಗಲಾಟೆ :

ಕಲಬುರಗಿಯ ಮಣ್ಣೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿನಲ್ಲೂ ಗಲಾಟೆ ನಡೆದಿದೆ.

ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು, ಹಿಜಾಬ್ ಧರಿಸಿಕೊಂಡು ಬಂದಿದ್ದರು. ಸರ್ಕಾರದ ಆದೇಶ ಉಲ್ಲಂಘಿಸಿ ಹಿಜಾಬ್, ಕೇಸರಿ ಶಾಲು ಹಾಕಿಕೊಂಡು ನೂರಾರು ವಿದ್ಯಾರ್ಥಿಗಳು ಬಂದಿದ್ದರು.

ಈ ವೇಳೆ ವಿದ್ಯಾರ್ಥಿಗಳನ್ನು ಕಾಲೇಜು ಸಿಬ್ಬಂದಿ ತಡೆದಿದ್ದಾರೆ.
ಕಾಂಪೌಂಡ್ ಹಾರಿ ಕ್ಯಾಂಪಸ್​ಗೆ ವಿದ್ಯಾರ್ಥಿಗಳು ನುಗ್ಗಿದರು

ಬಾಗಲಕೋಟೆ ಉದ್ವಿಗ್ನ :

ಬಾಗಕೋಟೆ ಜಿಲ್ಲೆಯ ರಬಕವಿಬನಹಟ್ಟಿ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ ಉಂಟಾಗಿತ್ತು.

ಬನಹಟ್ಟಿ ಸರ್ಕಾರಿ ಪಿಯು ಕಾಲೇಜು ಮುಂದೆ ನೂರಾರು ವಿದ್ಯಾರ್ಥಿನಿಯರು ಧರಣಿ ನಡೆಸಿದರು.

Share This Article
Leave a comment